ಕಾರವಾರ: ಸಮುದ್ರದ ದಂಡೆಯ ಮೇಲೆ ನಿಲ್ಲಿಸಿದ್ದ ಪ್ರವಾಸಿ ಬಸ್‍ವೊಂದು ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.
ಶುಕ್ರವಾರ ಬೆಂಗಳೂರಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದ ಡ್ರೈವರ್ ಬಸ್ ಅನ್ನು ಸಮುದ್ರ ತೀರದಲ್ಲೇ ನಿಲ್ಲಿಸಿದ್ದ. ಆದರೆ ಅಲೆಗಳಿಗೆ ನಿಧಾನವಾಗಿ ಮರಳು ಕೊಚ್ಚಿ ಹೋದಂತೆ ಬಸ್ ಕೂಡ ಸಮುದ್ರ ಕಡೆಗೆ ತೆರಳಿತ್ತು. ಅಷ್ಟರಲ್ಲಿ ಗಮನಿಸಿದ ಡ್ರೈವರ್ ಬಸ್ ಹತ್ತಿ ಹಿಂದೆ ತರುವ ಪ್ರಯತ್ನ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ.
Advertisement
Advertisement
ತಕ್ಷಣ ಪ್ರವಾಸಿಗರು ಬಸ್ಸನ್ನು ಹಗ್ಗದಿಂದ ಎಳೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗದೇ ಇದ್ದಾಗ ಸ್ಥಳೀಯರ ಟ್ರ್ಯಾಕ್ಟರ್‍ಗೆ ಹಗ್ಗ ಕಟ್ಟಿ ಎಳೆಯಲು ಪ್ರಯತ್ನಿಸಿದ್ದರಾದರು ಪ್ರಯೋಜನವಾಗಿರಲಿಲ್ಲ. ಕೊನೆಗೆ ಕ್ರೇನ್ ಮೂಲಕ ಎಳೆದು ಬಸ್ಸನ್ನು ತೆಗೆಯಲಾಯಿತು.
Advertisement
ಮುರುಡೇಶ್ವರದ ಕಡಲ ತೀರದಲ್ಲಿ ಪಾರ್ಕಿಂಗ್ ಮಾಡಿದ್ದ ಬಹುತೇಕ ಪ್ರವಾಸಿ ಬಸ್‍ಗಳು ಸಾಕಷ್ಟು ಬಾರಿ ಬಿದ್ದಿದ್ದವು. ಆದರೆ ಈ ಬಾರಿ ಬಸ್ ಸಮುದ್ರದಲ್ಲಿ ಕೊಚ್ಚಿ ಹೋಗಿ ಕೆಲ ಕಾಲ ಪ್ರವಾಸಿಗರು ಆತಂಕಕ್ಕೊಳಗಾಗುವಂತೆ ಮಾಡಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv