ವಾಷಿಂಗ್ಟನ್: ಪ್ರಯಾಣಿಕರೊಬ್ಬರು ಕೋವಿಡ್ ಮಾಸ್ಕ್ ಧರಿಸಲು ನಿರಾಕರಿಸಿದ್ದಕ್ಕೆ ಮಿಯಾಮಿಯಿಂದ ಲಂಡನ್‌ಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್‌ಲೈನರ್ ಮಧ್ಯಂತರದಲ್ಲೇ ವಾಪಸ್ ಆಗಿರುವ ಪ್ರಸಂಗ ನಡೆದಿದೆ.
ಅಮೆರಿಕನ್ ಏರ್‌ಲೈನ್ಸ್ ವಿಮಾನ-38 ಮಿಯಾಮಿಯಿಂದ ಲಂಡನ್‌ಗೆ ಹೊರಟಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ. ಹೀಗಾಗಿ ವಿಮಾನ ಅರ್ಧದಲ್ಲಿಯೇ ಮಿಯಾಮಿಗೆ ವಾಪಸ್ ಆಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶ – ನನ್ನ ಶಿಫ್ಟ್ ಮುಗಿಯಿತು ಮತ್ತೆ ಫ್ಲೈ ಮಾಡಲ್ಲ ಎಂದ ಪಾಕ್ ಪೈಲಟ್!
Advertisement
Advertisement
129 ಪ್ರಯಾಣಿಕರು ಮತ್ತು 14 ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ವಿಮಾನ ಮಿಯಾಮಿಗೆ ಹಿಂತಿರುಗಿದಾಗ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದರು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನಿಯಮ ಉಲ್ಲಂಘಿಸದ ಪ್ರಯಾಣಿಕನ್ನನು ವಿಮಾನದಿಂದ ಕೆಳಗಿಳಿಸಿದ್ದಾರೆ.
Advertisement
ಮಾಸ್ಕ್ ಧರಿಸಲು ನಿರಾಕರಿಸಿದವರು ಏರ್‌ಲೈನ್ಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಬಂಧಪಟ್ಟ ಪ್ರಯಾಣಿಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಅಲ್ಲಿಯವರೆಗೂ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ. ಇದನ್ನೂ ಓದಿ: ಈಕೆ ಪ್ರಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ ನಡೆಸಿದ ಅತ್ಯಂತ ಕಿರಿಯ ಪೈಲಟ್!
Advertisement
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, 2021ರಲ್ಲಿ ಯುಎಸ್ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ನಿಯಮವನ್ನು ಜಾರಿಗೊಳಿಸಿದೆ.