ಬಳ್ಳಾರಿ: ಯುಪಿಎಸ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪೂರ್ವ ಬಾಸುರ್ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಪೂರ್ವ ಅವರು ಯುಪಿಎಸ್‍ಸಿ ಪರೀಕ್ಷೆಯಲ್ಲಿ 191 ರ‍್ಯಾಂಕ್ ಪಡೆದಿದ್ದು, ಮೊದಲು ಪ್ರಯತ್ನದಲ್ಲಿಯೇ ತೇರ್ಗಡೆಯಾಗಿರುವುದು ವಿಶೇಷ. ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣದ ನಿವಾಸಿಯಾಗಿರುವ ಅಪೂರ್ವ ಅವರು ಮೆಡಿಕಲ್ ಜೆಡಿ ಶ್ರೀಕಾಂತ್ ಬಾಸೂರ್ ಏಕೈಕ ಮಗಳು. ಅಪೂರ್ವ ಸಹ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಕಳೆದ ಎಂಟು ವರ್ಷಗಳಿಂದ ಯುಪಿಎಸ್‍ಸಿ ಪರೀಕ್ಷೆಗಾಗಿ ಓದುತ್ತಿದ್ದರು. ಇದನ್ನೂ ಓದಿ: ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು
ಈ ಕುರಿತು ಅಪೂರ್ವ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ದಿನದ ಎಂಟು ಗಂಟೆಗಳ ಕಾಲ ನಿರಂತರ ಓದು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂತೋಷ ಹಂಚಿಕೊಂಡರು. ಮನೆಯಲ್ಲಿ ಪರೀಕ್ಷೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.