ಬೆಂಗಳೂರು: ಹನ್ನೆರಡನೇ ದಿನವೂ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಇಂದು ಆಸ್ಪತ್ರೆಯ ವೈದ್ಯರು ಮತ್ತು ನಟ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಪಾರ್ವತಮ್ಮನವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ರು. ವೆಂಟಿಲೇಟರ್‍ನಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಪಾರ್ವತಮ್ಮ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಉಸಿರಾಟ ಸುಲಭವಾಗಲಿ ಅಂತ ಟ್ರೈಕಾಸ್ಟಮಿ ಮಾಡಲಾಗಿದೆ. ಬಿಪಿ, ಪಲ್ಸ್ ಮೆಂಟೇನ್ ಮಾಡ್ತಿದ್ದೀವಿ ಅಂತ ಡಾ ಸಂಜಯ್ ಕುಲಕರ್ಣಿ ಹೇಳಿದ್ರು.
Advertisement
Advertisement
ಶಿವರಾಜ್ ಕುಮಾರ್ ಕೂಡ ಅಮ್ಮನ ಆರೋಗ್ಯದ ಬಗ್ಗೆ ಮಾತನಾಡಿದ್ರು. ಜ್ವರ ಇರುವುದರಿಂದ ನಿನ್ನೆಗೆ ಹೋಲಿಸಿದ್ರೆ ಇವತ್ತು ಆರೋಗ್ಯ ಸ್ವಲ್ಪ ಗಂಭೀರವಾಗಿದೆ. ನಿನ್ನೆ ಟ್ರೆಕಾಸ್ಟಮಿ ಮಾಡಿದ್ದರಿಂದ ಇಂದು ಜ್ವರ ಕಾಣಿಸಿಕೊಂಡಿದೆ. ಐಸಿಯು ನಲ್ಲಿ ಇರೋದ್ರಿಂದ ಕಂಡಿಷನ್ ಬದಲಾಗುತ್ತಿರುತ್ತೆ. ಇನ್ನು ಭರವಸೆಯನ್ನ ನಾವು ಬಿಟ್ಟಿಲ್ಲ. ನಾವು ಅಷ್ಟು ಸುಲಭಕ್ಕೆ ಬಿಟ್ಟುಕೊಡಲ್ಲ. ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ ಅಂತ ಶಿವರಾಜ್ ಕುಮಾರ್ ಹೇಳಿದ್ರು.
Advertisement
ಪಾರ್ವತಮ್ಮ ಅವರು ತೀರಾ ಗಂಭೀರ ಸ್ಥಿತಿಯಲ್ಲಿರೋದ್ರಿಂದ ಯಾರನ್ನೂ ಒಳಗಡೆ ಬಿಡಲಾಗ್ತಿಲ್ಲ. ದಯವಿಟ್ಟು ಯಾವುದೇ ನಟ ನಟಿಯರು ಅಥವಾ ಅಭಿಮಾನಿಗಳಾಗಲಿ ಎಲ್ಲಿದ್ದಿರೋ ಅಲ್ಲಿಂದಲೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಅಂತ ಎಂ ಎಸ್ ರಾಮಯ್ಯ ಆಸ್ಪತ್ರೆ ನಿರ್ದೇಶಕ ಪಟ್ಟಾಭಿರಾಮ್ ಹೇಳಿಕೆ ನೀಡಿದ್ರು.