ಬೆಂಗಳೂರು: ಮುಂದಿನ ತಿಂಗಳು ವಿಧಾನಸಭಾ ಚುನಾವಣೆ (Assembly Election) ಇರುವುದರಿಂದ ರಾಜಕೀಯ ಪಕ್ಷಗಳು ಬಿರುಸಿನ ವೇಗದಲ್ಲಿ ಪ್ರಚಾರ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಕೂಡಾ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸತತ 110 ದಿನಗಳಿಗೂ ಹೆಚ್ಚುಕಾಲ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಈಗ ಏಕಾಂಗಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ನಿರಂತರ ಪಯಣ, ಸಮಯದ ಅಭಾವ ಅವರಿಗೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.
Advertisement
Advertisement
ಗುರುವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬೆಂಗಳೂರಿಗೆ ಹೊರಟ ಮಾಜಿ ಮುಖ್ಯಮಂತ್ರಿಗಳು, ಮಾರ್ಗಮಧ್ಯದಲ್ಲಿಯೇ ಕಾರಿನಲ್ಲಿ ಕುಳಿತು ಊಟ ಮಾಡಿದರು. ಬಳಿಕ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಬಂಡಾಯ ಶಮನಕ್ಕೆ ಡಿಕೆಶಿ ಗಿಮಿಕ್? – ಕೆಪಿಸಿಸಿ ಅಧ್ಯಕ್ಷ ಹಾಕಿದ್ದ ಪೋಸ್ಟ್ ಸುಳ್ಳೆಂದ ಟಿಕೆಟ್ ವಂಚಿತ
Advertisement
Advertisement
ಹೀಗೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವುದರಿಂದ ಹೆಚ್‌ಡಿಕೆ ಬಿಡುವು ಮಾಡಿಕೊಳ್ಳದೇ ಪ್ರಯಾಣದ ನಡುವೆಯೇ ಪಕ್ಷದ ಕೆಲಸ, ಆಹಾರ ಸೇವನೆ, ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ನಿಯಮ ಉಲ್ಲಂಘನೆ – AAP ಅಭ್ಯರ್ಥಿ ವಿರುದ್ಧ ಮೊಕದ್ದಮೆ ದಾಖಲು