ಬೆಂಗಳೂರು: ಜುಲೈ 14 ರಂದು ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಅವಶೇಷ ಬುಧವಾರ ಯಾವುದೇ ನಿಯಂತ್ರಣವಿಲ್ಲದೆ ಭೂಮಿಗೆ ಬಿದ್ದಿದೆ ಎಂದು ಇಸ್ರೋ (ISRO) ತಿಳಿಸಿದೆ.
ಈ ರಾಕೆಟ್ (Rocket) ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ಇದಾಗ 124 ದಿನಗಳ ಬಳಿಕ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಬುಧವಾರ ಭೂಮಿಯನ್ನು ತಲುಪಿದೆ. ಅದು ಭಾರತದ ಭೂಭಾಗದ ಮೇಲೆ ಬೀಳದೆ ಉತ್ತರ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ತಿಳಿಸಿದೆ.
ಬುಧವಾರ ಮಧ್ಯಾಹ್ನ 2:42ರ ವೇಳೆಗೆ ಅದು ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದೆ. ವಿಶ್ವಸಂಸ್ಥೆ ಮತ್ತು ಐಎಡಿಸಿ ಸೂಚಿಸಿದ ಬಾಹ್ಯಾಕಾಶ ಶಿಲಾಖಂಡಗಳನ್ನು ತಗ್ಗಿಸುವ ಮಾರ್ಗಸೂಚಿಗಳ ಪ್ರಕಾರ ಆಕಸ್ಮಿಕ ಸ್ಫೋಟಗಳ ಅಪಾಯವನ್ನು ಕಡಿಮೆ ಮಾಡಲು ರಾಕೆಟ್‌ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನು ತೆಗೆದುಹಾಕಲಾಗಿತ್ತು. ಇದು ಬಾಹ್ಯಾಕಾಶದಲ್ಲಿ ಅಂತಾರಾಷಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: ಫೈನಲಿಗೆ ಟೀಂ ಇಂಡಿಯಾ – ನಾಯಕನಾಗಿ ದಾಖಲೆ ಬರೆದ ರೋಹಿತ್ ಶರ್ಮಾ
ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್‌ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ. ಇದನ್ನೂ ಓದಿ: World Cup Semifinal: 7 ವಿಕೆಟ್ ಕಿತ್ತು ಗ್ಲೆನ್ ಮ್ಯಾಕ್‌ಗ್ರಾತ್ ದಾಖಲೆ ಸರಿಗಟ್ಟಿದ ಶಮಿ