ಸಂಸತ್ ಭವನದ ಮೇಲೆ ದಾಳಿ ಪ್ರಕರಣ – 6 ಆರೋಪಿಗಳ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

Public TV
1 Min Read
Huge Parliament Security Breach Lok Sabha Speaker ombirla bans visitor gallery passes 1

ನವದೆಹಲಿ: ಸಂಸತ್‌ ಭವನದ ಮೇಲೆ ದಾಳಿ (Parliament Security Breach) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್‌ ಕೋರ್ಟ್‌ಗೆ 1,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

2023 ರ ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡವು ಶುಕ್ರವಾರ ತನ್ನ ಮೊದಲ ಚಾರ್ಜ್‌ಶೀಟ್ (Charge Sheet) ಅನ್ನು ಇಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ

Delhi Parliament Smoke Bomb Security breach

ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಡಿ.ಮನರಂಜನ್, ಲಲಿತಾ ಝಾ, ಅಮೋಲ್ ಶಿಂಧೆ, ಮಹೇಶ್ ಕುಮವತ್, ಸಾಗರ್ ಶರ್ಮಾ, ನೀಲಂ ಅಜಾದ್ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದೆ. ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೇ 24 ರಂದು ನ್ಯಾಯಾಲಯವು ತನಿಖೆಯನ್ನು ಪೂರ್ಣಗೊಳಿಸಲು ಪೊಲೀಸರಿಗೆ 13 ದಿನಗಳ ಕಾಲಾವಕಾಶವನ್ನು ನೀಡಿತ್ತು. 1,000 ಪುಟಗಳ ಚಾರ್ಜ್‌ಶೀಟ್ ಅನ್ನು ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕೆಲವು ವರದಿಗಳನ್ನು ನಿರೀಕ್ಷಿಸಲಾಗಿದೆ. ಡಿಜಿಟಲ್ ಡೇಟಾ ದೊಡ್ಡದಾಗಿದೆ ಎಂದು ಪೊಲೀಸರು ಹೇಳಿಕೊಂಡ ನಂತರ ಕಳೆದ ಬಾರಿ ವಿಸ್ತರಣೆಯನ್ನು ನೀಡಿದ್ದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದ ಕೆಲವರು ಒಳಗಡೆ ನುಗ್ಗಿ ಭದ್ರತಾ ನಿಯಮ ಉಲ್ಲಂಗಿದ್ದರು. ಸಂಸತ್‌ ಒಳಗೆ ಸ್ಮೋಕ್‌ ಬಾಂಬ್‌ ಸಿಡಿಸಿ ಗದ್ದಲ ಸೃಷ್ಟಿಸಿದ್ದರು. ಒಳಗಿದ್ದ ಸಂಸದರು ಭಯಭೀತರಾಗಿದ್ದರು.

ಆಜಾದ್ ಮತ್ತು ಶಿಂಧೆ ಸಂಸತ್ತಿನ ಹೊರಗೆ ಸ್ಮೋಕ್‌ ಬಾಂಬ್ ಸಿಡಿಸಿ ಘೋಷಣೆಗಳನ್ನು ಕೂಗಿದರು. ಝಾ ಸಂಪೂರ್ಣ ಯೋಜನೆಯ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಇತರ ನಾಲ್ವರು ಆರೋಪಿಗಳ ಮೊಬೈಲ್ ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಕುಮಾವತ್ ಕೂಡ ಆರೋಪಿಗಳ ಜತೆ ನಂಟು ಹೊಂದಿದ್ದರು.

Share This Article