ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ನಿರ್ದೇಶಕರ ಅವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳವರೆಗೆ ವಿಸ್ತರಿಸುವ ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ.
Advertisement
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಂಡಿಸಿದ್ದ ʻಕೇಂದ್ರ ವಿಚಕ್ಷಣಾ ದಳ (ತಿದ್ದುಪಡಿ) ಮಸೂದೆ 2021ʼ ಅನ್ನು ಮಂಗಳವಾರ 12 ಸದಸ್ಯರ ಅಮಾನತು ಖಂಡಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೂ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್
Advertisement
ಸಿಬಿಐ ನಿರ್ದೇಶಕರ ಅಧಿಕಾರವಧಿ ವಿಸ್ತರಿಸಲು ದೆಹಲಿ ವಿಶೇಷ ಪೊಲೀಸ್ ವ್ಯವಸ್ಥೆ (ತಿದ್ದುಪಡಿ) ಸುಗ್ರೀವಾಜ್ಞೆ-2021 ಮತ್ತು ಇ.ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ-2021 ಅನ್ನು ಕೇಂದ್ರ ಸರ್ಕಾರವು ಈ ಹಿಂದೆ ಹೊರಡಿಸಿತ್ತು. ಅದಕ್ಕೆ ರಾಷ್ಟ್ರಪತಿ ಅವರು ಸಹಿ ಹಾಕಿದ್ದರು.
Advertisement
Advertisement
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲ್‍ಎನ್ ರಾವ್ ನೇತೃತ್ವದ ಪೀಠವು, ಜಾರಿ ನಿರ್ದೇಶನಾಲಯದ ಎಸ್.ಕೆ.ಮಿಶ್ರಾ ಅವರ ಅಧಿಕಾರವಧಿಯ ವಿಸ್ತರಣೆ ಸಂಬಂಧ ತೀರ್ಪು ನೀಡಿತ್ತು. ಅಪರೂಪದ ಹಾಗೂ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅಧಿಕಾರವಧಿ ವಿಸ್ತರಿಸಬಹುದು ಎಂದು ಪೀಠವು ಒತ್ತಿ ಹೇಳಿತ್ತು. ಇದನ್ನೂ ಓದಿ: ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?