Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

Public TV
1 Min Read
Rubina Francis 2

ಪ್ಯಾರಿಸ್‌: ಪ್ರಸ್ತುತ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ (Paris Paralympics 2024) ಕ್ರೀಡಾಕೂಟದಲ್ಲಿ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (Air Pistol) ಸ್ಪರ್ಧೆಯಲ್ಲಿ ಶೂಟರ್ ರುಬಿನಾ ಫ್ರಾನ್ಸಿಸ್‌ (Rubina Francis) ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ 5ನೇ ಪದಕವಾಗಿದೆ. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಅಖಾಡಕ್ಕಿಳಿಯೋದು ಫಿಕ್ಸ್‌ – ಸುಳಿವು ಕೊಟ್ಟ ರೈನಾ

Rubina Francis

22 ಶಾಟ್‌ಗಳ ಬಳಿಕ 211.1 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದ ರುಬಿನಾ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದ್ರೆ, ಟರ್ಕಿಯ ಐಸೆಲ್ ಓಜ್ಗಾನ್, ರುಬಿನಾರನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಂತಿಮವಾಗಿ ರುಬಿನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇರಾನ್‌ನ ಸರೆಹ್ ಜವನ್‌ಮಾರ್ಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದನ್ನೂ ಓದಿ: Paris 2024 Paralympics | ಭಾರತಕ್ಕೆ ಡಬಲ್‌ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್‌

ಇನ್ನೂ ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi) ಕೂಡ ಆಕ್ಷನ್‌ನಲ್ಲಿದ್ದಾರೆ. ಗುರುವಾರ ನಡೆದ ಆರ್ಮ್‌ಲೆಸ್ ಬಿಲ್ಲುಗಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 2ನೇ ಸ್ಥಾನ ಗಳಿಸಿರುವ ಶೀತಲ್‌ ದೇವಿ ನೇರವಾಗಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

Share This Article