ಚೆನ್ನೈ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಯು ಮೆಗಾ ಹರಾಜಿಗೂ ಮುನ್ನವೇ ಭಾರೀ ಕುತೂಹಲ ಹೆಚ್ಚಿಸಿದೆ. ಏಕೆಂದರೆ ಮೂರು ವರ್ಷಗಳ ಬಳಿಕ ಮೆಗಾ ಹರಾಜು ನಡೆಯುತ್ತಿದ್ದು, ಬಲಿಷ್ಠ ಆಟಗಾರರು ಯಾವ ತಂಡವನ್ನು ಸೇರಲಿದ್ದಾರೆ ಅನ್ನೋ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2025ರ ಐಪಿಎಲ್‌ನಲ್ಲಿ ಎಂ.ಎಸ್ ಧೋನಿ (MS Dhoni) ಕಣಕ್ಕಿಳಿಯುವ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳಿವು ಕೊಟ್ಟಿದ್ದಾರೆ.
Suresh Raina backs MS Dhoni to play IPL 2025. (Sports Tak). pic.twitter.com/TK2x54zips
— Mufaddal Vohra (@mufaddal_vohra) August 30, 2024
Advertisement
ಹೌದು. ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad), ಮಹಿ ಮತ್ತೊಂದು ಆವೃತ್ತಿಗೆ ಚೆನ್ನೈ ತಂಡದ ಕೈ ಹಿಡಿಯಬೇಕೆಂದು ಬಯಸಿದ್ದಾರೆ. ಜೊತೆಗೆ ರುತುರಾಜ್‌ಗೆ ಇನ್ನಷ್ಟು ನಾಯಕತ್ವದ ಗುಣಗಳನ್ನು ಕಲಿಸಬೇಕಿದೆ ಆದ್ದರಿಂದ ಧೋನಿ ಮುಂದಿನ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಪರ ಆಡಲಿದ್ದಾರೆ ಎಂದು ಸಿಎಸ್‌ಕೆ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ
Advertisement
ಸ್ಫೋರ್ಟ್ಸ್ ಟಾಕ್ ಜೊತೆಗೆ ಮಾತನಾಡಿದ ಸುರೇಶ್ ರೈನಾ (Suresh Raina), ಐಪಿಎಲ್‌ನಲ್ಲಿ ಧೋನಿ ಅವರ ಪಾಲಿಗೆ ಮತ್ತೊಂದು ಸೀಸನ್ ಉಳಿದಿರುವಂತೆ ಕಾಣುತ್ತಿದೆ. ಕಳೆದ ವರ್ಷ ಅವರು ಹೇಗೆ ಬ್ಯಾಟಿಂಗ್ ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ 2025ರ ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.
Advertisement
Advertisement
ಕಳೆದ ವರ್ಷ ಆರ್‌ಸಿಬಿ (RCB) ವಿರುದ್ಧ ನಾಕೌಟ್ ಪಂದ್ಯದಲ್ಲಿ ಸೋತ ನಂತರ ರುತುರಾಜ್ ಮತ್ತೊಂದು ವರ್ಷ ಧೋನಿ ಸಿಎಸ್‌ಕೆ (CSK) ತಂಡಕ್ಕೆ ಬೇಕು ಅಂತ ಕೇಳಿಕೊಂಡಿದ್ದರು. ಈಗಾಗಲೇ ರುತುರಾಜ್ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದರೂ, ಇನ್ನಷ್ಟು ತಿಳಿಯುವ ಅವಶ್ಯಕತೆಯಿದೆ ಎಂದು ರೈನಾ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: Paris 2024 Paralympics | ಭಾರತಕ್ಕೆ ಡಬಲ್ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್
2024ರ ಐಪಿಎಲ್‌ಗೂ ಮುನ್ನ ಎಂ.ಎಸ್ ಧೋನಿ ಅವರು ಸಿಎಸ್‌ಕೆ ನಾಯಕತ್ವ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು. ಕಳೆದ ವರ್ಷ ಐಪಿಎಲ್‌ನಲ್ಲಿ ಮೊಣಕಾಲು ಗಾಯದ ಸಮಸ್ಯೆಗೆ ತುತ್ತಾಗಿದ್ದ ಮಹಿ, ಫಿನಿಶರ್ ಪಾತ್ರದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 14 ಪಂದ್ಯಗಳಿಂದ 220.25 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 161 ರನ್ ಗಳಿಸಿದ್ದರು. ಆದ್ರೆ 2025ರ ಐಪಿಎಲ್‌ನಲ್ಲಿ ಧೋನಿಯನ್ನು ಉಳಿಸಿಕೊಳ್ಳುವುದು, ಬಿಡುವುದು ಬಿಸಿಸಿಐ (BCCI) ನಿಗದಿಪಡಿಸುವ ನಿಯಮದ ಮೇಲೆ ನಿರ್ಧಾರವಾಗಿದೆ. ಆದ್ದರಿಂದ ಧೋನಿ ಅವರನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಬೇಕೇ ಅಥವಾ ರಿಟೇನ್ ಮಾಡಿಕೊಳ್ಳಬೇಕೆ ಎಂಬ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಿಎಸ್‌ಕೆ ಫ್ರಾಂಚೈಸಿ ಹೇಳಿದೆ.
ಅನ್‌ಕ್ಯಾಪ್ಡ್ ಪ್ಲೇಯರ್ ಆಗ್ತಾರಾ ಮಹಿ?
ಐಪಿಎಲ್ ನಿಯಮದ ಪ್ರಕಾರ, ಯಾವುದೇ ರಾಷ್ಟ್ರೀಯ ತಂಡದ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 5 ವರ್ಷ ಮುಕ್ತಾಯಗೊಂಡು, ಐಪಿಎಲ್‌ನಲ್ಲಿ ಭಾಗವಹಿಸಿದರೆ, ಅವರನ್ನ ಅನ್‌ಕ್ಯಾಪ್ಡ್ ಪ್ಲೇಯರ್ (ಹೊಸಬರು) ಅಂತ ಪರಿಗಣಿಸಲಾಗುತ್ತದೆ. ಧೋನಿ ಅವರು 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. 2025ರ ಆಗಸ್ಟ್ 15ಕೆ 5 ವರ್ಷ ಪೂರ್ಣಗೊಳ್ಳಲಿದೆ. ಒಂದು ವೇಳೆ ಮುಂದಿನ ವರ್ಷ ಜೂನ್, ಜುಲೈನಲ್ಲೇ ಐಪಿಎಲ್ ನಡೆದರೆ, ಅದು ಧೋನಿ ಅವರಿಗೂ ಲಾಭವಾಗಲಿದೆ. ಏಕೆಂದರೆ ಧೋನಿ ಅವರು ಪ್ರಸ್ತುತ ಒಂದು ಆವೃತ್ತಿಗೆ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಪರಿಗಣಿಸಿದರೆ, ಸುಮಾರು 4 ಕೋಟಿ ರೂ. ಅಷ್ಟೇ ಸಂಭಾವನೆ ಸಿಗಲಿದೆ ಎಂದು ಫ್ರಾಂಚೈಸಿ ಮೂಲಗಳಿಂದ ತಿಳಿದುಬಂದಿದೆ.