ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ (Paris Olympics) ಭಾರತಕ್ಕೆ (India) ಮೂರನೇ ಪದಕ ಗೆದ್ದುಕೊಂಡಿದೆ.
50 ಮೀ. ರೈಫಲ್ 3 ಪೊಸಿಶನ್‌ನಲ್ಲಿ (50m Rifle 3P) ಸ್ವಪ್ನಿಲ್ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
Advertisement
ಭಾರತ ಈ ಬಾರಿ ಗೆದ್ದ ಮೂರು ಕಂಚಿನ ಪದಕಗಳು ಶೂಟಿಂಗ್‌ನಿಂದಲೇ ಬಂದಿರುವುದು ವಿಶೇಷ. ಇದಕ್ಕೂ ಮೊದಲು ಮನು ಭಾಕರ್ (Manu Bhaker)ಎರಡು ಕಂಚಿನ ಪದಕ ಗೆದ್ದಿದ್ದರು.