ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದಲ್ಲಿ ಪದಕ ಗೆಲ್ಲುವ ಹೊಸ್ತಿಲಲ್ಲಿದ್ದ ವಿನೇಶ್ ಫೋಗಟ್ (Vinesh Phogat) ಹೆಚ್ಚುವರಿ ತೂಕದಿಂದಾಗಿ ಅನರ್ಹಗೊಂಡು ನಿರಾಸೆ ಮೂಡಿಸಿದರು. ಫೈನಲ್ ಪಂದ್ಯ ಆಡುವುದಕ್ಕಾಗಿ ತೂಕ ಕಡಿತಗೊಳಿಸಲು ಇಡೀ ದಿನ ಸಾಕಷ್ಟು ಕಸರತ್ತು, ಕಠಿಣ ವ್ಯಾಯಾಮ ಮತ್ತು ಆಹಾರ ಪದ್ಧತಿ ಅನುಸರಿಸಿದ್ದರು. ಅದಾಗ್ಯೂ ನಿಗದಿಯಷ್ಟು ತೂಕ ಇಳಿಸಲಾಗದೇ ಅನರ್ಹಗೊಂಡಿದ್ದಾರೆ.
ಏನೇನು ಕಠಿಣ ಕ್ರಮ ಅನುಸರಿಸಿದ್ದರು ಕುಸ್ತಿಪಟು?
ಪ್ರತಿ ಪಂದ್ಯದಲ್ಲಿ ಕುಸ್ತಿಪಟುಗಳ ತೂಕ ಮಾಡುವುದು ಕಡ್ಡಾಯ ನಿಯಮ. ನಿನ್ನೆಯ (ಆ.6) ಪಂದ್ಯದಲ್ಲಿ ಕುಸ್ತಿಪಟು 50 ಕೆಜಿ ಯೊಳಗಿದ್ದರು. ನಿನ್ನೆವರೆಗೂ ಎಲ್ಲವೂ ನಿಯಮಗಳ ಪ್ರಕಾರ ನಡೆದಿದೆ. ನಿನ್ನೆಯ ಪಂದ್ಯ ಅಂತ್ಯವಾದಾಗ ಅವರು 52 ಕೆಜಿ ಇದ್ದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಒಲಿಂಪಿಕ್ಸ್ ಮಂಡಳಿಯೊಂದಿಗೆ ಚರ್ಚಿಸಿ ಫೈನಲ್ ಆಡಲು ಅವಕಾಶ ಕಲ್ಪಿಸಿಕೊಡಬೇಕು: ಬೊಮ್ಮಾಯಿ
Advertisement
Advertisement
ಕುಸ್ತಿಪಟುಗಳು ತೂಕ ಇಳಿಸಲು ಅಗತ್ಯಕ್ಕೆ ಹೆಚ್ಚು ಡಯೆಟ್ ಮಾಡ್ತಾರೆ. ಕೆಲವೊಮ್ಮೆ ಬರೀ ನೀರು ಕುಡಿಯುತ್ತಾರೆ. ತೂಕ ಹೆಚ್ಚಾದ ಹಿನ್ನೆಲೆ ಈ ಅವಧಿಯಲ್ಲಿ ತೂಕ ಇಳಿಸಲು ವಿನೇಶ್ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ರಾತ್ರಿಯೆಲ್ಲಾ ತೂಕ ಇಳಿಸಲು ಪ್ರಯತ್ನ ಮಾಡಿದ್ದಾರೆ. ತೂಕ ಇಳಿಸಿದ ಮೇಲೂ 150 ಗ್ರಾಂ ಅಧಿಕವಾಯ್ತು. ಇದಾದ ಬಳಿಕ 30 ನಿಮಿಷ ತೂಕ ಇಳಿಸಲು ಅವಕಾಶ ನೀಡಿದ್ದರು. ಬಳಿಕ 15 ನಿಮಿಷ ಸಮಯ ನೀಡಲಾಗಿತ್ತು.
Advertisement
ತಲೆಗೂದಲು ಕಟ್ ಮಾಡಿದ್ದ ವಿನೇಶ್!
ತಲೆಗೂದಲು ಕಟ್ ಮಾಡುವ ಮೂಲಕ ಕುಸ್ತಿಪಟು ವಿನೇಶ್ ಫೋಗಟ್ ಎಲ್ಲ ರೀತಿಯ ಪ್ರಯತ್ನ ಮಾಡಿದರು. ಬಳಿಕವೂ 100-150 ತೂಕ ಹೆಚ್ಚಿತ್ತು. ವೈದ್ಯರು ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿಲ್ಲ. ಏನಾದರೂ ಮಾಡಿದರೆ ಜೀವಕ್ಕೆ ಅಪಾಯ ಎಂದು ಹೇಳಿದ್ದರು ಎನ್ನಲಾಗಿದೆ. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ಆಸ್ಪತ್ರೆಗೆ ದಾಖಲು
Advertisement
ವರದಿಯ ಪ್ರಕಾರ, ನಿನ್ನೆ ರಾತ್ರಿ ವಿನೇಶ್ 2 ಕೆಜಿ ಅಧಿಕ ತೂಕ ಹೊಂದಿದ್ದರು. ಹೆಚ್ಚುವರಿ ತೂಕವನ್ನು ಕಡಿತಗೊಳಿಸಲು ರಾತ್ರಿಯಿಡೀ ಕೆಲಸ ಮಾಡಿದರು. ವಿನೇಶ್ ಅವರು 12 ಗಂಟೆಗಳಿಗೂ ಹೆಚ್ಚು ಕಾಲ ಏನನ್ನೂ ತಿನ್ನಲಿಲ್ಲ. ಏನನ್ನೂ ಕುಡಿಯಲಿಲ್ಲ ಮತ್ತು ಕಠಿಣ ದಿನಚರಿಯಲ್ಲಿ ಭಾಗವಹಿಸಿದರು. ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿ ಶ್ರಮಿಸಿದ್ದರು.
ಈಗ ಫೈನಲ್‌ನಿಂದ ಅನರ್ಹ ಆದ ಹಿನ್ನೆಲೆ ಬೆಳ್ಳಿ ಪದಕವೂ ಸಿಗುವುದಿಲ್ಲ. ನಿಯಮಗಳ ಪ್ರಕಾರ ಎಲ್ಲವೂ ನಡೆದಿದೆ. ಈ ಹಂತದಲ್ಲಿ ಯಾವುದೇ ಒತ್ತಡ ಹೇರಿದರೂ ಸಾಧ್ಯವಿಲ್ಲ. ಹಾಕಿ ಸೇರಿದಂತೆ ಬೇರೆ ಪಂದ್ಯಗಳಲ್ಲಿ ಅಂಪೈರ್‌ಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಬಹುದು. ಇದು ತೂಕದ ವಿಚಾರವಾಗಿರುವ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲ. 53 ಕೆಜಿ ಸ್ಪರ್ಧೆ ಮಾಡುತ್ತಿದ್ದ ವಿನೇಶ್ ಬಳಿಕ 50 ಕೆಜಿಗೆ ಸ್ಪರ್ಧಿಸಿದ್ದರು. ಸಾಕಷ್ಟು ಶ್ರಮ ಹಾಕಿ ತೂಕ ಇಳಿಸಿದ್ದರು. ಇದನ್ನೂ ಓದಿ: Paris Olympics| ಭಾರತಕ್ಕೆ ಆಘಾತ – ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ