ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸಿಕ್ಕಿದೆ. ಪುರುಷರ ಕುಸ್ತಿ 57 ಕೆಜಿ ಪ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ (Aman Sehrawat) ಕಂಚು ಗೆದ್ದು ಬೀಗಿದ್ದಾರೆ.
ಶುಕ್ರವಾರ ಚಾಂಪ್ ಡಿ ಅರೆನಾದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್ ವಿರುದ್ಧ ಅಮನ್ ಗೆಲುವು ಸಾಧಿಸಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಲ್ಲಿವರೆಗೆ 5 ಕಂಚು, ಒಂದು ಬೆಳ್ಳಿ ಪದಕ ದಕ್ಕಿದೆ. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಮಧ್ಯಸ್ಥ ಮಂಡಳಿ ರಿಲೀಫ್ ನೀಡುತ್ತಾ? – ಒಲಿಂಪಿಕ್ಸ್ ಮುಗಿಯೋ ಮುನ್ನ ಸಿಎಎಸ್‌ನಿಂದ ತೀರ್ಪು
Advertisement
Advertisement
ಶುಕ್ರವಾರ ಚಾಂಪ್ ಡಿ ಅರೆನಾದಲ್ಲಿ ನಡೆದ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕವನ್ನು ಪಡೆದರು.
Advertisement
Advertisement
ಪ್ಯಾರಿಸ್ ಸಮ್ಮರ್ ಗೇಮ್ಸ್‌ನ ಅತ್ಯಂತ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕುಸ್ತಿಪಟು ಜಪಾನ್‌ನ ರೇ ಹಿಗುಚಿ ವಿರುದ್ಧ ಸೋತಿದ್ದರು. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್ ಸಿಸೋಡಿಯಾ