ಡಾ.ರಾಜ್ ಕುಮಾರ್ (Dr. Raj Kumar) ಜನುಮದಿನಕ್ಕಾಗಿ ನಿನ್ನೆ ಸೋಮವಾರದಂದು ವಿಲೇಜ್ ರೋಡ್ ಫಿಲಂಸ್ ಅವರು ನಿರ್ಮಿಸಿರುವ ‘ಪರಿಮಳ ಡಿಸೋಜಾ’ (Parimala D’Souza) ಕನ್ನಡ ಚಲನಚಿತ್ರದ ‘ಇದು ನನ್ನ ನಿನ್ನ ಒಲವಿನ ಗೀತೆ’ಯ ಲಿರಿಕಲ್ ವಿಡಿಯೋ ಸಾಂಗ್ (Song) ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಬಿಡುಗಡೆ (Release) ಮಾಡಿದ್ದಾರೆ.
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಶ್ರುತಿ ಅವರ ಯುಗಳ ಸ್ವರದಲ್ಲಿ ಈ ಗೀತೆ ಮೂಡಿ ಬಂದಿದ್ದು, ಕ್ರಿಸ್ಟೋಫರ್ ಜೇಸನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಶೇಷಾದ್ರಿ ಅವರ ಸಾಹಿತ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?
ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಮತ್ತು ಜಯಂತ್ ಕಾಯ್ಕಿಣಿ ಗೀತೆಗಳನ್ನು ಬರೆದಿದ್ದಾರೆ. ಕೆ.ಕಲ್ಯಾಣ್ ಬರೆದಿರುವ ಸಾಹಿತ್ಯಕ್ಕೆ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಹಾಡಿರುವುದು ವಿಶೇಷ.
ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಖ್ಯಾತ ಗಾಯಕಿ ಅನುರಾಧ ಭಟ್ ಹಾಡಿದ್ದಾರೆ. ಈ ಎರಡು ಹಾಡುಗಳು ಪುನೀತ್ ರಾಜ್ ಕುಮಾರ್ ಅವರ ಹುಟುಹಬ್ಬದಂದು ರಿಲೀಸ್ ಆಗಿವೆ. ‘ಇದು ನನ್ನ ನಿನ್ನ ಒಲವಿನ ಗೀತೆ’ ಲಿರಿಕಲ್ ವಿಡಿಯೋ ಸಾಂಗ್ ನಿನ್ನೆ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಬಿಡುಗಡೆಗೊಂಡಿದೆ.