ಮೈಸೂರು: ಚಿಕ್ಕ ವಯಸ್ಸಿನ ಹುಡುಗನದ್ದು ಆಕಸ್ಮಿಕ ಸಾವು ಎಂಬುದು ಅನುಮಾನ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪರೇಶ್ ಮೇಸ್ತಾ ಕೇಸ್ ಬಗ್ಗೆ ಸಿಬಿಐ ವರದಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಚಿಕ್ಕ ವಯಸ್ಸಿನ ಹುಡುಗನದ್ದು ಆಕಸ್ಮಿಕ ಸಾವು ಎಂಬುದು ಅನುಮಾನ ಎಂದರು.
Advertisement
Advertisement
ಇದೇ ವೇಳೆ ಬಿಜೆಪಿ ಸರ್ಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಕೈಯಿಗೆ ರಕ್ತದ ಕಲೆ ಅಂಟಿದೆ. ಟಿಪ್ಪು ಜಯಂತಿ ಹೆಸರಿದಲ್ಲಿ ದೇಶದಲ್ಲಿ ಗಲಭೆ ಎಬ್ಬಿಸಿದ್ದು ಸಿದ್ದರಾಮಯ್ಯ. ಮಡಿಕೇರಿ ಕುಟ್ಟಪ್ಪ ಸಾವಿಗೆ ಸಿದ್ದರಾಮಯ್ಯ ಕಾರಣ. ಪಿಎಫ್‍ಐ ನವರಿಗೆ ಕುಮ್ಮಕ್ಕು ನೀಡಿ ಗಲಭೆಗೆ ಕಾರಣರಾದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಪರೇಶ್ ಮೇಸ್ತಾದು ಕೊಲೆಯೇ, ಸಿದ್ದು ಸರ್ಕಾರದಿಂದ ಸಾಕ್ಷ್ಯ ನಾಶ: ರವಿಕುಮಾರ್ ಕಿಡಿ
Advertisement
Advertisement
ಏನಿದು ಘಟನೆ..? 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶಟ್ಟಿ ಕೆರೆಯಲ್ಲಿ ಶವವಾಗಿ ಪರೇಶ್ ಮೇಸ್ತಾ ಪತ್ತೆಯಾಗಿದ್ದ. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು.
ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಹೊನ್ನಾವರ ರಣರಂಗವಾಗುತ್ತಿದ್ದಂತೆ ಎಚ್ಚೆತ್ತ ಅಂದಿನ ಸಿದ್ದರಾಮಯ್ಯ ಸರ್ಕಾರ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಂತರ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಸಿಬಿಐನಿಂದ ವರದಿ ಸಲ್ಲಿಸಿದೆ.