ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಯುವತಿ ಪೋಷಕರು ಬೇರ್ಪಡಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
Advertisement
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ಮಹಮ್ಮದ್ ಆಖಿಬ್, ಒಡಿಸ್ಸಾ ಮೂಲದ ಪ್ರಿಯತ ರೌತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಯುವತಿ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಯುವತಿಯನ್ನು ಪೊಲೀಸ್ ಠಾಣೆಯಿಂದ ಕರೆದುಕೊಂಡು ಹೋಗಿದ್ದಾರೆ. ಪತ್ನಿಗಾಗಿ ಯುವಕ ಕಣ್ಣೀರಿಟ್ಟು, ತನ್ನನ್ನು ಬಿಟ್ಟು ಹೋಗದಂತೆ ಚೀರಾಡಿದ್ದಾನೆ. ಇದನ್ನೂ ಓದಿ: NSE ವಂಚನೆ ಪ್ರಕರಣ – ಮಾಜಿ CEO ಚಿತ್ರಾ ರಾಮಕೃಷ್ಣ ಬಂಧನ
Advertisement
Advertisement
ಮಗಳು ಅಪಹರಣವಾಗಿದ್ದಾಳೆಂದು ಪೋಷಕರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಯುವತಿಯನ್ನು ಒಡಿಸ್ಸಾ ಪೊಲೀಸರು ಕರೆದೊಯ್ದಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿಯೇ ಯುವತಿಯನ್ನು ಒಡಿಸ್ಸಾ ಪೊಲೀಸರು ಎಳೆದೊಯ್ದಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ ಏರಿಕೆ
Advertisement