ಬೀದರ್: ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು ಹಾಗೂ ಬಾಂಬ್ ಗಳು ಸ್ಫೋಟವಾಗುತ್ತಿದ್ದು, ನಮ್ಮ ಮಕ್ಕಳು ಆತಂಕದಲ್ಲಿ ಇದ್ದಾರೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಸದ್ಯ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನಲ್ಲಿ ಬೀದರ್ ಮೂಲದ 6 ಜನ ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪ್ರತಿ ಕ್ಷಣ ಭಯದಲ್ಲಿ ಬದುಕುತ್ತಿದ್ದಾರೆ. ವಿದ್ಯಾರ್ಥಿ ಅಮಿತ್ ಮೆಟ್ರೋ ಸ್ಟೇಷನ್ ಬಂಕರ್‍ನಲ್ಲಿ ರಕ್ಷಣೆ ಪಡೆಯುತ್ತಿದ್ದರೆ ಉಳಿದ ಐದು ಜನ ಹಾಸ್ಟೆಲ್ ಬಂಕರ್‍ನಲ್ಲಿ ವಾಸವಾಗಿ ರಕ್ಷಣೆ ಪಡೆಯುತ್ತಿದ್ದಾರೆ. ಆದರೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರು ಸಿಗದೇ ನಗರದ ವಿದ್ಯಾರ್ಥಿಗಳು ಕ್ಷಣ ಕ್ಷಣಕ್ಕೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು
ನಮ್ಮ ಮಕ್ಕಳು ವಾಸವಿರುವ ಬಿಲ್ಡಿಂಗ್ ಮೇಲೆ ಕ್ಷಿಪಣಿಗಳು, ಬಾಂಬ್‍ಗಳು ಸ್ಪೋಟವಾಗುತ್ತಿವೆ. ಖಾರ್ಕಿವ್‍ನಲ್ಲಿರುವ ನಮ್ಮ ಮಕ್ಕಳು ಕಷ್ಟದಲ್ಲಿದ್ದು ಸರ್ಕಾರ ಮೊದಲು ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಿ. ಖಾರ್ಕಿವ್‍ನಲ್ಲಿ ಸದ್ಯ ಪರಿಸ್ಥಿತಿ ಭಯಾನಕವಾಗಿದ್ದು, ಅಷ್ಟೇ ಭಯಂಕರವಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ