ಲಂಡನ್: ಹುಡುಗ ಆಗಿ ಹುಟ್ಟಿ ಹೆಣ್ಣು ಮಕ್ಕಳ ರೀತಿ ಉಡುಪುಗಳನ್ನು ಧರಿಸಿ ಹುಡುಗಿಯರಂತೆಯೇ ಇರಬೇಕು ಎಂದು ಬಯಸಿದ ಮಗನಿಗೆ ಪೋಷಕರೇ ಲಿಂಗ ಪರಿವರ್ತನೆ ಚಿಕಿತ್ಸೆ ಕೊಡಿಸುತ್ತಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ.
ಕಿಯಾನ್ ಹುಡುಗ ಆಗಿ ಹುಟ್ಟಿದ್ದನು. ಆದರೆ ಅವನು ತನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ತನ್ನನ್ನು ಝೋಯಿ ಎಂದು ಕರೆಯಲು ಹೇಳುತ್ತಿದ್ದನು. ಬೇಸಿಗೆ ರಜೆ ಮುಗಿದ ನಂತರ ಶಾಲೆಗೆ ಸ್ಕರ್ಟ್ ಹಾಗೂ ಟೈಟ್ಸ್ ಧರಿಸಿಕೊಂಡು ಹೋಗುತ್ತಿದ್ದನು.
Advertisement
Advertisement
ಈ ರೀತಿ ಬದಲಾಗಿದ್ದು ನನ್ನಲ್ಲಿ ಸಾಕಷ್ಟು ಖುಷಿ ತಂದಿದೆ ಹಾಗೂ ನನಗೆ ಧೈರ್ಯ ಬಂದಿದೆ ಎಂದು ಆತ ಹೇಳಿದ್ದಾನೆ. ಆತನ ಪೋಷಕರು ಅದಷ್ಟು ಬೇಗ ಮಗನಿಗೆ ಪ್ಯೂರ್ಬಟಿ ಬ್ಲಾಕಿಂಗ್ ಡ್ರಗ್ಸ್ ಕೊಡಿಸುವುದಾಗಿ ನಿರ್ಧರಿಸಿದ್ದಾರೆ.
Advertisement
Advertisement
ಪೋಷಕರಾದ ಕರೆನ್ ಹಾಗೂ ಡೇವಿಡ್ ತಮ್ಮ ಮನೆಯಿಂದ 150 ಕಿ.ಮಿ ದೂರವಿರುವ ಲಂಡನ್ ಆಸ್ಪತ್ರೆಯಲ್ಲಿ ಝೋಯಿಗೆ ಆದಷ್ಟು ಬೇಗ ಚಿಕಿತ್ಸೆ ಶುರುವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಝೋಯಿಯ ಪ್ರೌಢಾವಸ್ಥೆ ಪ್ರರಂಭವಾಗೋದನ್ನ ನಿಯಂತ್ರಿಸಲು ಮಾಸಿಕ ಹಾರ್ಮೋನ್ ಇಂಜೆಕ್ಷನ್ ಶುರು ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಈಗ ಆತನ ವಯಸ್ಸು 12, ಶೀಘ್ರದಲ್ಲೇ 13 ವಯಸ್ಸಿಗೆ ಕಾಲಿಡುತ್ತಿದ್ದಾನೆ. ಪ್ರೌಢಾವಸ್ಥೆ ಶುರುವಾಗುವುದಕ್ಕೆ ಮುಂಚೆಯೇ ಚಿಕಿತ್ಸೆ ಕೊಡಿಸಬೇಕು. ಡಗ್ರ್ಸ್ ತಗೆದುಕೊಳ್ಳುವುದರಿಂದ ಅವನಿಗೆ ತನ್ನಚ್ಛಿಯಂತೆ ಇರಲು ಸಾಧ್ಯವಾದ್ರೆ ಹಾಗೇ ಆಗಲಿ. ನಮಗೆ ಅವನ ಸಂತೋಷ ಮುಖ್ಯ ಎಂದು ಝೋಯಿ ತಾಯಿ ಕರೆನ್ ತಿಳಿಸಿದ್ದಾರೆ.
ಈ ಪ್ರಕ್ರಿಯೆ ಅವನಿಗೆ ಸುಲಭವಲ್ಲ. ಆದರೆ ಬ್ಲಾಕರ್ಸ್ ತೆಗೆದುಕೊಳ್ಳುವುದೇ ಝೋಯಿಗೆ ಅಗತ್ಯವಿದ್ದರೆ ನಾನು 100% ಆತನ ಬೆಂಬಲವಾಗಿರ್ತೀನಿ ಎಂದು ಝೋಯಿ ತಂದೆ ಡೇವಿಡ್ ತಿಳಿಸಿದ್ದಾರೆ.