ಬೆಳಗಾವಿ: ಮೆದುಳು ಜ್ವರದಿಂದ ಬಳಲುತ್ತಿದ್ದ ಎಂಟು ವರ್ಷದ ಮಗನ ಜೀವ ಉಳಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದ ದಂಪತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಬಳಿಕ ಶಿಲುಬೆ ಎದುರು ಮಗುವನ್ನು ಮಲಗಿಸಿ ಮಗುವಿನ ಜೀವ ಉಳಿಸಿಕೊಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.
Advertisement
ಈ ವಿಷಯ ತಿಳಿದು ಬೆಳಗಾವಿ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್ ಗೆಳೆಯರ ತಂಡದವರು ಮಗುವಿನ ನೆರವಿಗೆ ಧಾವಿಸಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಸದ್ಯ ಮಗುವಿನ ಆರೋಗ್ಯ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್
Advertisement
Advertisement
ಘಟನೆಯ ಹಿನ್ನೆಲೆ:
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ, ಮಹಾದೇವಿ ಸೂತ್ರವಿ ದಂಪತಿ ಪುತ್ರ ಶೈಲೇಶ್‍ನಿಗೆ ಮೆದುಳು ಜ್ವರ ಕಾಣಿಸಿಕೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇದಾದ ಬಳಿಕ ಕೃಷ್ಣಾ, ಮಹಾದೇವಿ ಸೂತ್ರವಿ ದಂಪತಿ ಶೈಲೇಶ್‍ನನ್ನು ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದರು. ಆದ್ರೆ, ಶೈಲೇಶ್ ಆರೋಗ್ಯ ಮಾತ್ರ ಚೇತರಿಕೆ ಆಗಿರಲಿಲ್ಲ. ಇತ್ತ ವೈದ್ಯರು ಕೂಡ ಕೈಚೆಲ್ಲಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ಈವರೆಗೆ ಒಟ್ಟು 7 ಬಾರಿ ಭೂಕಂಪನ
Advertisement
ಇದಾದ ನಂತರ ದಿಕ್ಕು ತೋಚದ ದಂಪತಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಹೊರವಲಯದಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ತಂದು ಶಿಲುಬೆ ಮುಂದೆ ಮಲಗಿಸಿ ಶೈಲೇಶ್‌ನನ್ನು ಉಳಿಸಿಕೊಡುವಂತೆ ಪರಿಪರಿಯಾಗಿ ದೇವರಲ್ಲಿ ಬೇಡಿಕೊಂಡಿದ್ದರು. ಬಳಿಕ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್‍ನ ಯುವಕರು ಆ ದಂಪತಿ ನೆರವಿಗೆ ಬಂದ್ದಿದಲ್ಲದೇ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಹ ಶೈಲೇಶ್ ಸಂಪೂರ್ಣ ಆರೋಗ್ಯದ ಖರ್ಚುವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಶೈಲೇಶ್ ಚೇತರಿಕೆ ಕಾಣುತ್ತಿದ್ದಾನೆ.