– ಮಗಳ ಮದ್ವೆಗೆ 2,400 ಪುಸ್ತಕ ಗಿಫ್ಟ್ ಕೊಟ್ಟ ತಂದೆ
– ವಿವಿಧ ದೇಶ ಸುತ್ತಾಡಿ ಪುಸ್ತಕ ಸಂಗ್ರಹಣೆ
ಗಾಂಧಿನಗರ: ಸಾಮಾನ್ಯವಾಗಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಪೋಷಕರು ಹಣ, ಆಭರಣ ಅಥವಾ ಮಗಳಿಗೆ ಇಷ್ಟವಾಗುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಗುಜರಾತ್‍ನಲ್ಲಿ ತಂದೆಯೊಬ್ಬರು ಮದುವೆಯಾದ ಮಗಳಿಗೆ ಎತ್ತಿನಗಾಡಿಯಲ್ಲಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಅಪರೂಪದ ಘಟನೆ ರಾಜ್‍ಕೋಟ್‍ನಲ್ಲಿ ನಡೆದಿದೆ. ವಧು ಕಿನ್ನರಿ ತಮ್ಮ ತಂದೆ ಹರ್ದೇವ್ ಸಿಂಗ್ ಬಳಿ ನನ್ನ ಮದುವೆಗೆ ಹಣ, ಆಭರಣ ಕೊಡುವ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ ಎಂದು ಕೇಳಿಕೊಂಡಿದ್ದಳು. ಮಗಳ ಇಷ್ಟದಂತೆ ತಂದೆ ದೇಶದ ವಿವಿಧ ನಗರಗಳಲ್ಲಿ ಸಂಚರಿಸಿ ಪುಸ್ತಕಗಳನ್ನು ಸಂಗ್ರಹಿಸಿ ಎತ್ತಿನಗಾಡಿಯಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.
Advertisement
Advertisement
ಹರ್ವೇದ್ ಸಿಂಗ್ ವೃತ್ತಿಯಿಂದ ಶಿಕ್ಷಕ. ಇವರು ದೆಹಲಿ, ಕಾಶಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದೀರ್ಘಕಾಲ ಸುತ್ತಾಡಿ ತಮ್ಮ ಮಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ ತಮ್ಮ ಮಗಳು ಕಿನ್ನರಿಗೆ 2400 ಪುಸ್ತಕಗಳನ್ನು ಮದುವೆಯ ದಿನ ಎತ್ತಿಗಾಡಿಯಲ್ಲಿ ತುಂಬಿ ಉಡುಗೊರೆಯಾಗಿ ನೀಡಿದ್ದಾರೆ. ಕಿನ್ನರಿ ಸ್ವಲ್ಪ ಪುಸ್ತಕಗಳನ್ನು ತನ್ನೊಂದಿಗೆ ಪತಿಯ ಮನೆಗೆ ತೆಗೆದುಕೊಂಡು ಹೋಗಲಿದ್ದಾಳೆ. ಇತರ ಪುಸ್ತಕಗಳನ್ನು ವಿವಿಧ ಶಾಲೆಗಳಿಗೆ ನೀಡಲಾಗುವುದು.
Advertisement
Advertisement
ನನ್ನ ಮಗಳು ಬಾಲ್ಯದಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹೀಗಾಗಿ ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆಯೇ ಪುಸ್ತಕಗಳನ್ನು ಕೊಡಿಸಿದ್ದೇನೆ. ನಮ್ಮ ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ ಎಂದು ತಂದೆ ಸಂತಸದಿಂದ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜೊತೆಗೆ ಗುಜರಾತಿ ಹಾಗೂ ಇಂಗ್ಲೀಷ್‍ನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ಜನರು ಪುಸ್ತಕಗಳಿಂದ ದೂರವಾಗುತ್ತಿವಾಗ ಕಿನ್ನರಿ ತಮ್ಮ ಮದುವೆಯಲ್ಲಿ ವರದಕ್ಷಿಣೆ ಎಂದು ಚಿನ್ನ, ಬೆಳ್ಳಿ ಮತ್ತು ಆಭರಣಗಳ ಬದಲು ಪೋಷಕರಿಂದ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.