ಬೆಂಂಗಳೂರು: ಮಕ್ಕಳು ಬ್ಯಾಗ್ ಯೂನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋಗುವಾಗ ಪೋಷಕರು ನೂರು ಕನಸು ಗರಿಗೆದರುತ್ತದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಭವಿಷ್ಯ ಮಾದಕ ವ್ಯಸನದೊಳಗೆ ಬಂಧಿಯಾಗುತ್ತಿದೆ. ಶಾಲಾ ಮಕ್ಕಳನ್ನೇ ಈ ಕೆಟ್ಟ ಜಾಲ ಟಾರ್ಗೆಟ್ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯೇ ಭಯಾನಕ ಸತ್ಯವನ್ನು ಹೊರಹಾಕಿದೆ.
ಪಾನಿಪುರಿಯಲ್ಲಿ ಡ್ರಗ್ಸ್ ಹಾಕಿಕೊಡಲಾಗುತ್ತಿದೆ. ಬೆಂಗಳೂರು ಡ್ರಗ್ಸ್ ಜಾಲದ ಸಿಟಿಯಾಗಿದೆ ಎಂದು ಶಾಸಕ ವಿಜಯ್ ಕುಮಾರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದಾಗ ಇದು ಸಾಧ್ಯನೇ ಇಲ್ಲ ಎಂದು ಹೇಳಿದ್ದರು. ಆದರೆ ಇದು ನಿಜ ಅಂತಾ ಆರೋಗ್ಯ ಇಲಾಖೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.
Advertisement
ಶಾಲೆಯ ಅಕ್ಕಪಕ್ಕದಲ್ಲಿ ಪಾನಿಪುರಿಯೊಳಗೆ, ಐಸ್ ಕ್ರೀಂನಲ್ಲಿಯೇ ಮಕ್ಕಳಿಗೆ ಡ್ರಗ್ಸ್ ರುಚಿ ತೋರಿಸುವ ಜಾಲ ಬೆಳೆದಿದೆ. ಈ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಆದ್ದರಿಂದ ಈಗಾಗಲೇ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೊಟ್ಟಿದ್ದು, ಶಾಲೆಯ ನೂರು ಮೀಟರ್ ಅಂತರದಲ್ಲಿರುವ ಅನುಮಾನಸ್ಪದ ಶಾಪ್, ಐಸ್‍ಕ್ರೀಂ ಪಾನೀಪುರಿ ಅಂಗಡಿಗಳ ಮೇಲೆ ಕಣ್ಣಿಡುವಂತೆ ಆದೇಶಿಸಿಲಾಗಿದೆ. ಅಲ್ಲದೇ ಪೋಷಕರಿಗೂ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಜಂಟಿ ಆಯುಕ್ತ ಹರ್ಷವರ್ಧನ್ ಹೇಳಿದ್ದಾರೆ.
Advertisement
ಮಕ್ಕಳ ಬದುಕು ಕಸಿದುಕೊಳ್ಳುವ ಈ ಜಾಲದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಇದ್ದರೆ ದೂರು ನೀಡುವಂತೆ ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ವಿಭಾಗ ತನಿಖಾಧಿಕಾರಿಗಳ ತಂಡ ರಚನೆ ಮಾಡಿಕೊಂಡು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿವೆ.
Advertisement