ಗಾಂಧಿನಗರ: ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗುವೊಂದು ಕೆರೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದೆ.
ಶುಕ್ರವಾರ ಅಲ್ತಾನ್ ಗಾರ್ಡನ್ ನಲ್ಲಿ ತಮ್ಮ ಹೆಣ್ಣು ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.
Advertisement
ನಡೆದದ್ದು ಏನು?
ಆಗಸ್ಟ್ 3 ರಂದು ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸೂರತ್ ಸಮೀಪದ ಅಲ್ತಾನ್ ನ್ಯಾಷನಲ್ ಪಾರ್ಕ್ ಗೆ ಹೋಗಿದ್ದರು. ಮಕ್ಕಳನ್ನು ಪಾರ್ಕ್ ನಲ್ಲಿ ಆಟವಾಡಲು ಬಿಟ್ಟು, ದಂಪತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. 3 ವರ್ಷದ ಹೆಣ್ಣು ಮಗುವೊಂದು ಆಟವಾಡುತ್ತ ಅಲ್ಲಿದ್ದ ಕೆರೆಗೆ ಜಾರಿ ಬಿದ್ದಿತ್ತು. ಆದರೆ ಪೋಷಕರು ತಮ್ಮ ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
Advertisement
ಶನಿವಾರ ತನಿಖೆ ಕೈಗೊಂಡ ಪೊಲೀಸರಿಗೆ ಪಾರ್ಕ್ ನ ಕೆರೆಯ ದಂಡೆಯಲ್ಲಿ ಮಗುವಿನ ಶೂ ಪತ್ತೆಯಾಗಿತ್ತು. ಮಗು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಿ, ಪತ್ತೆಗಾಗಿ ಕಾರ್ಯಾಚರಣೆ ಪ್ರಾರಂಭಸಿದ್ದರು. ಸ್ವಲ್ಪ ಸಮಯದ ನಂತರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Advertisement
ನಾವು ಮಕ್ಕಳನ್ನು ಉದ್ಯಾನದಲ್ಲಿ ಬಿಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿದ್ದೇವು. ಈ ವೇಳೆ ಮಗು ಕೆರೆಗೆ ಬಂದಿರುವ ವಿಚಾರ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖತೋಧಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದ ದಾಖಲಿಸಿದ್ದಾರೆ.