ಬೆಂಗಳೂರು: ನಿಮ್ಮ ಮನೆಯ ಆಸುಪಾಸು ನಾಯಿಗಳಿದ್ದರೆ ಪೋಷಕರೇ ಎಚ್ಚರವಾಗಿರಿ. ನಾಯಿಗಳಿಗೆ ಈಗ ಪ್ರಸವ ಕಾಲವಾಗಿದ್ದು, ಎಲ್ಲಂದರಲ್ಲಿ ಮಾಂಸ ಸಿಗದಿದ್ದರೆ ಹಾಗೂ ಸಂಪರ್ಕಕ್ಕೆ ಮತ್ತೊಂದು ಸಂಗಾತಿ ಸಿಗದಿದ್ದರೆ ಸಿಕ್ಕ ಸಿಕ್ಕವರನ್ನು ಕಚ್ಚಲು ಶುರು ಮಾಡಿವೆ.
ಚಳಿಗಾಲ ಬರುತ್ತಿದ್ದಂತೆಯೇ ಹಾದಿ ಬೀದಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇದಕ್ಕೆ ಕಾರಣ ನಾಯಿಗಳಿಗೆ ಈಗ ಪ್ರಸವ ಕಾಲ. ಸಂಗಾತಿ ಸಿಗದಿದ್ದರೆ ಹೀಗೆ ಮಾಡುತ್ತವೆ. ಅಷ್ಟೇ ಅಲ್ಲದೇ ಅಕ್ಕಪಕ್ಕ ಮಾಂಸದಂಗಡಿಗಳಿದ್ದು ಆಹಾರ ಸಿಗದಿದ್ದರೂ ನಿಮ್ಮ ಮಕ್ಕಳು ತಿಂಡಿ ಹಿಡಿದು ರಸ್ತೆಯಲ್ಲಿ ನಡೆದಾಡುತ್ತಿದ್ದರೆ, ಮಕ್ಕಳನ್ನು ಟಾರ್ಗೆಟ್ ಮಾಡುತ್ತವೆ.
Advertisement
Advertisement
ಬೀದಿ ನಾಯಿಗಳಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗದಿದ್ದರೆ, ಅದರಲ್ಲೂ ಮಾಂಸದಂಗಡಿಗಳು ಆಸುಪಾಸಿನಲ್ಲಿ ಪ್ರಾಣಗಳಿಗೆ ತ್ಯಾಜ್ಯವನ್ನು ಹಾಕಿ ತಿನ್ನುವ ಅಭ್ಯಾಸ ಮಾಡಿಸಿದರೆ ಎಚ್ಚರ ಇರಲಿ. ಒಂದು ದಿನ ಫುಡ್ ಮಿಸ್ ಆದರೂ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ಎರಗಬಹುದು. ಹೀಗಾಗಿ ಪಾಲಿಕೆ ಈ ಸಂಬಂಧ ಹೊಸ ನಿರ್ಧಾರಕ್ಕೆ ಬಂದಿದೆ.
Advertisement
ಈ ಪ್ರಕಾರ ಪ್ರಾಣಿ ವೆಸ್ಟ್ ಬ್ಲಾಕ್ ಸ್ಟಾರ್ಟ್‍ಗಳಲ್ಲಿ ಬಿಸಾಡೋರನ್ನು ಕಂಡರೆ ತಕ್ಷಣ ಪಾಲಿಕೆಗೆ ಮಾಹಿತಿ ನೀಡಿ. ಕೊಟ್ಟಾಕ್ಷಣ ಅಂಗಡಿಯವರೊಂದಿಗೆ ಗಲಾಟೆ ಬೇಡ. ಬೀದಿ ನಾಯಿ ಕಚ್ಚುತ್ತೆ ಎನ್ನುವ ತಲೆನೋವು ಕೂಡ ಬೇಡ. ತಕ್ಷಣ ಪಾಲಿಕೆ ಮಾಂಸದಂಗಡಿಗೆ ದಂಡ ಹಾಕಿ ಮತ್ತೆ ತ್ಯಾಜ್ಯ ಹಾಕದಂತೆ ಮಾಡುತ್ತದೆ.
Advertisement
ಪಾಲಿಕೆ ಈಗ ಮಾಂಸದಂಗಡಿ ಮೇಲೆ ಕ್ರಮ ಜರುಗಿಸಲು ಸಿದ್ಧವಾದರೂ ಪೋಷಕರಂತೂ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಹೊಸ ದಾರಿ ಸಿಕ್ಕಂತೆ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews