ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಹುತೇಕ ವಸತಿ ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಪೋಷಕರು ಮನೆಗಳಿಗೆ ಕರೆದೊಯ್ಯುತ್ತಿದ್ದಾರೆ.
ದಾವಣಗೆರೆಯ ಸಿದ್ದಗಂಗಾ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳನ್ನು ಮನೆಗೆ ಕರೆದೊಯ್ಯುಲಾಗುತ್ತಿದೆ. ವಸತಿ ಶಾಲೆಯಲ್ಲಿ ಇದ್ದರೆ ಕೊರೊನಾ ಸೋಂಕು ನಮ್ಮ ಮಕ್ಕಳಿಗೂ ಸಹ ಬರಬಹುದು ಎಂದು ಪೋಷಕರು ಆತಂಕ ಪಡುತ್ತಿದ್ದಾರೆ. ಈ ಪರಿಣಾಮ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಿ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ
Advertisement
Advertisement
ಪೋಷಕರ ಒತ್ತಾಯದಂತೆ ಮಕ್ಕಳನ್ನು ಕಾಲೇಜು ಅಡಳಿತ ಮನೆಗೆ ಕಳುಹಿಸುತ್ತಿದೆ. ದಾವಣಗೆರೆಯಲ್ಲಿ ಒಂದು ವಾರದಲ್ಲಿ 213 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಈಗ ಇನ್ನಷ್ಟು ಪ್ರಕರಣಗಳು ಹೆಚ್ಚಾಗಬಹುದು ಎಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
Advertisement
ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಕ್ಕಳನ್ನು ಓದಲು ಬಿಟ್ಟಿರುವ ನಗರ ಸಮೀಪದ ಊರಿನ ಪೋಷಕರು ಆಡಳಿತ ಮಂಡಳಿಗೆ ಫೋನ್ ಮಾಡಿ ಮಕ್ಕಳ ಸುರಕ್ಷತೆ ವಿಚಾರಿಸುತ್ತಿದ್ದಾರೆ.
Advertisement
2 ಅಥವಾ 3 ತಿಂಗಳಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳಿರುವ ಕಾರಣ ವಿದ್ಯಾರ್ಥಿಗಳಿಗೆ ಇದು ತುಂಬಾ ಮಹತ್ವದ ಸಮಯ. ಹಾಗೆಂದು ಅವರನ್ನು ಇಲ್ಲೇ ಇರಲು ಬಿಟ್ಟು ಕೊರೊನಾಗೆ ತುತ್ತಾಗಿಸಲು ಪೋಷಕರು ಸಿದ್ಧರಿಲ್ಲ. ಇತ್ತ ರಿಸ್ಕ್ ತೆಗೆದುಕೊಳ್ಳಲು ಆಡಳಿತ ಮಂಡಳಿಯವರು ಸಿದ್ಧರಿಲ್ಲ. ಹೀಗಾಗಿ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಶಾಲೆಗಿಂತ ಮನೆಯಲ್ಲಿ ಇರುವುದೇ ಹೆಚ್ಚು ಸುರಕ್ಷಿತ ಎಂಬುದು ಹೆತ್ತವರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
ಈಗಾಗಲೇ ನಗರದ ಸರ್‍ಎಂವಿ ಕಾಲೇಜಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಲೆಬೆನ್ನೂರಿನ ಸರ್ಕಾರಿ ಪಿಯು ಕಾಲೇಜು, ಹರಿಹರದ ಪಾಲಿಟೆಕ್ನಿಕ್ ಕಾಲೇಜು ಹಾಗೂ ಚನ್ನಗಿರಿ ತಾಲೂಕು ಮಾವಿನಹೊಳೆ ವಸತಿ ಶಾಲೆ ಕೆಲ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಈ ಸೋಂಕು ಕಾಣಿಸಿಕೊಂಡ ಶಾಲಾ ಕಾಲೇಜುಗಳಿಗೆ ಒಂದುವಾರ ರಜೆ ಘೋಷಿಸಲಾಗಿದೆ. ಉಳಿದಂತೆ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ನಗರದ ಹಲವು ಖಾಸಗಿ ಕಾಲೇಜುಗಳು ಸ್ವಯಂಪ್ರೇರಿತವಾಗಿ ಆನ್ ಲೈನ್ ಪಾಠಕ್ಕೆ ಮೊರೆ ಹೋಗಿವೆ.