ಉಡುಪಿ: ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕನ್ನು (Parashurama Theme Park) ಸಿ.ಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಉದ್ಘಾಟನೆ ಮಾಡಿದರು. ಪರಶುರಾಮನ ಬೃಹತ್ ಪ್ರತಿಮೆಯ ಮೂಲಕ ತುಳುನಾಡು (Tulu Nadu) ಬಂಗಾರದ ನಾಡು ಆಗಲಿ ಎಂದು ಈ ವೇಳೆ ಸಿಎಂ ಶುಭ ಹಾರೈಸಿದರು.
ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಕಾರ್ಕಳಕ್ಕೆ ಆಗಮಿಸಿದ ಬೊಮ್ಮಾಯಿ, ಕಾರ್ಕಳ ಜಿಲ್ಲಾ ಕ್ರೀಡಾಂಗಣದಲ್ಲಿ ಇಳಿದು ರಸ್ತೆ ಮಾರ್ಗ ಮೂಲಕ ಬೈಲೂರಿಗೆ ಆಗಮಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಪರಶುರಾಮನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಥೀಂ ಪಾರ್ಕ್ ನ ಉದ್ಘಾಟನೆ ಮಾಡಲಾಯಿತು.
Advertisement
Advertisement
ಸುಮಾರು 15 ಕೋಟಿ ವೆಚ್ಚದಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗ ಮಂದಿರ ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣವಾಗಿದೆ. ಪರಶುರಾಮ ಥೀಂ ಪಾರ್ಕ್ ಉದ್ಘಾಟಿಸಿ ಸಿಎಂ ಬೊಮ್ಮಾಯಿ ಪುರಾಣದ ಕಥೆಗಳನ್ನು ಹೇಳಿದರು. ಇಂದು ಕರ್ನಾಟಕದ ಕರಾವಳಿಯ (Karavali) ಐತಿಹಾಸಿಕ ದಿನ. ಪರಶುರಾಮ ಥೀಂ ಪಾರ್ಕ್, ಪ್ರತಿಮೆ ಅನಾವರಣ ಮಾಡಿದ ನಾವು ಭಾಗ್ಯವಂತರು. ಇದೊಂದು ಇತಿಹಾಸ ಸೃಷ್ಟಿ ಮಾಡಿದ ದಿನ ಎಂದು ಹೇಳುತ್ತೇನೆ. ಪರಶುರಾಮ ರೋಚಕ ಕಥೆ ಇರುವ ಅವತಾರ ಪುರುಷ ಎಂದು ಬಣ್ಣಿಸಿದರು.
Advertisement
ಪರಶುರಾಮ (Parashurama) ಮಹಾಭಾರತದಲ್ಲಿ ಕರ್ಣನ ವ್ಯಕ್ತಿತ್ವದಂತೆಯೇ. ಶಿವನಿಂದ ವರ ಪಡೆದ ವೀರ ಶೂರ ಅಗಾಧ ಶಕ್ತಿ ಹೊಂದಿದ್ದ ವ್ಯಕ್ತಿ ಪರಶುರಾಮ. ರೇಣುಕಾದೇವಿಯ ಪ್ರೀತಿಯ ಮಗ ಕೊನೆಗೆ ತಾಯಿಯ ಶಿರಚ್ಛೇದನ ಮಾಡುತ್ತಾನೆ. ವಿಶ್ವವನ್ನು 21 ಬಾರಿ ಸುತ್ತಿ ಗೆಲುವು ಸಾಧಿಸುತ್ತಾನೆ. ಸಮುದ್ರಕ್ಕೆ ಕೊಡಲಿ ಎಸೆದು ಭೂಭಾಗ ಸೃಷ್ಟಿಯಾಗುತ್ತದೆ. ಸೃಷ್ಟಿಕರ್ತನ ಕಥೆ ಪುರಾಣದಲ್ಲಿದೆ. ಮುಂದಿನ ಪೀಳಿಗೆಗೆ ಈ ಕಥೆ ಬೇಕಾಗುತ್ತದೆ ಅದಕ್ಕಾಗಿ ಈ ಥೀಂ ಪಾರ್ಕ್ ಸ್ಥಾಪನೆ ಆಗಿದೆ ಎಂದರು.
Advertisement
ಸುನೀಲ್ ಕುಮಾರ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಜನ ಸೇವಕನ ಗುಣ. ನಾನು ಪರಶುರಾಮನ ಭಕ್ತನಾಗಿ ಉದ್ಘಾಟನೆಗೆ ಬಂದಿದ್ದೇನೆ. ಥೀಂ ಪಾರ್ಕ್ ಟೂರಿಸಂ ಸೆಂಟರ್ ಜೊತೆ ಪುಣ್ಯಭೂಮಿ ಕೂಡಾ ಆಗಲಿದೆ. ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಕರಾವಳಿಗೆ ಟೂರಿಸಂ ನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ. ಈ ಭಾಗದ ಜನ ಪರಿಶ್ರಮ ಜೀವಿಗಳು. ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಕರಾವಳಿಗೆ ಪ್ಯಾಕೇಜ್ ಕೊಡಲ್ಲ ಬದುಕು ಕಟ್ಟಿಕೊಡುತ್ತೇವೆ. ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: Pariksha Pe Charcha 2023: ಪೋಷಕರು ಮಕ್ಕಳಿಗೆ ಒತ್ತಡ ಹಾಕಬೇಡಿ – ವಿದ್ಯಾರ್ಥಿಗಳು ತಾಯಿಯಿಂದ ಸಮಯದ ನಿರ್ವಹಣೆ ಕಲಿಯಿರಿ: ಮೋದಿ
ಅಗಾಧ ನೈಸರ್ಗಿಕ ಸಂಪತ್ತು, ಸುಂದರ ಕಡಲ ತೀರಗಳು, ಧಾರ್ಮಿಕ ತಾಣಗಳನ್ನು ಹೊಂದಿರುವ ಕರಾವಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಈ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆಂದು ವಿಶೇಷ ಮಾಸ್ಟರ್ ಪ್ಲಾನ್ ರೂಪಿಸಿ, ಅದನ್ನು ಜಾರಿಗೆ ತರುತ್ತೇವೆ. pic.twitter.com/CEVzgyLmUn
— Basavaraj S Bommai (@BSBommai) January 27, 2023
ಇಂಧನ ಮತ್ತು ಕನ್ನಡ ಸಂಸ್ಕೃತಿಯ ಇಲಾಖೆಯ ಸಚಿವ ಸುನಿಲ್ ಕುಮಾರ್ (Sunil Kumar) ಮಾತನಾಡಿ, ಕರಾವಳಿಯ ಪ್ರವಾಸೋದ್ಯಮದ ಪಟ್ಟಿಗೆ ಪರಶುರಾಮ ಥೀಂ ಪಾರ್ಕ್ ಸೇರ್ಪಡೆಯಾಗಿದೆ. ಬೆಟ್ಟದ ಮೇಲಿಂದ 360 ಡಿಗ್ರಿಯಲ್ಲಿ ಸುತ್ತಲ ಪರಿಸರವನ್ನು ನೋಡುವ ಅವಕಾಶ ಇದೆ. ಒಂದು ಭಾಗದಲ್ಲಿ ಸಮುದ್ರ ಮತ್ತೊಂದು ಭಾಗದಲ್ಲಿ ಪಶ್ಚಿಮ ಘಟ್ಟವನ್ನು ಕಣ್ತುಂಬಿಕೊಳ್ಳಬಹುದು ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k