ಬೆಂಗಳೂರು: ಭವಾನಿ ರೇವಣ್ಣ (Bhavani Revanna) ಅವರನ್ನು ಪೊಲೀಸರು ಅರೆಸ್ಟ್ ಮಾಡಲು ಹುಡುಕುತ್ತಿದ್ದಾರೆ. ಸಿಕ್ಕಿದ ತಕ್ಷಣ ಅವರ ಬಂಧನವಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ಪೊಲೀಸರು ಹುಡುಕಿ, ಬಂಧಿಸಲಿದ್ದಾರೆ. ಇದೆಲ್ಲ ಕಾನೂನು ಪ್ರಕಾರ ನಡೆಯುತ್ತದೆ. ಈ ವಿಚಾರ ಸರ್ಕಾರಕ್ಕೆ ಸವಾಲಿನ ಪ್ರಶ್ನೆಯೇ ಅಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರವಾಗಿ, ನಾಳೆ (ಜೂ.3) ಪರಿಷತ್ ಚುನಾವಣೆ ನಾಮಿನೇಷನ್‍ಗೆ ಕೊನೆಯ ದಿನವಾಗಿದ್ದು, ಅದಕ್ಕೆ ಸಭೆಯನ್ನು ಕರೆಯಲಾಗಿದೆ. ನಾಮಿನೇಷನ್ ಪೇಪರ್‌ಗೆ 10 ಜನ ಸಹಿ ಮಾಡಬೇಕು. ಇದೇ ಕಾರಣಕ್ಕೆ ಸಭೆ ಕರೆದಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗಳನ್ನು ಮೀರಿ ಐತಿಹಾಸಿಕ ಗೆಲುವು ಸಾಧಿಸಲಿದೆ ಬಿಜೆಪಿ – NDAಗೆ 400ಕ್ಕೂ ಹೆಚ್ಚು ಸ್ಥಾನ ಖಚಿತ: ಜೋಶಿ