21 ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರು – ಬೋಸ್ ರಾಷ್ಟ್ರೀಯ ಸ್ಮಾರಕದ ಮಾದರಿ ಅನಾವರಣಗೊಳಿಸಿದ ಮೋದಿ

Public TV
2 Min Read
NARENDRA MODI 2

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (Andaman and Nicobar Islands) 21 ದೊಡ್ಡ ಹೆಸರಿಸದ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಮವೀರ ಚಕ್ರ (Param Vir Chakra) ಪಡೆದ ಸೈನಿಕರ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಪರಾಕ್ರಮ ದಿವಸ್ (Parakram Diwas) ಭಾಗವಾಗಿ ಸೈನಿಕರಿಗೆ ಗೌರವ ಸಲ್ಲಿಸಲು ದ್ವೀಪಗಳಿಗೆ ಸೈನಿಕರ ಹೆಸರಿಡಲಾಗಿದೆ.

Unnamed Island

ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ನರೇಂದ್ರ ಮೋದಿ, ರಾಸ್ ಐಲ್ಯಾಂಡ್ಸ್ ಎಂದು ಕರೆಯಲಾಗುತ್ತಿದ್ದ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರಬೋಸ್ (Netaji Subash Chandra Bose) ಎಂದು ಮರುನಾಮಕರಣ ಮಾಡಿದ್ದು ಅಲ್ಲಿ ಅವರ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಅನಾವರಣಗೊಳಿಸಿದರು. ಅಂಡಮಾನ್ ಭೂಮಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಭೂಮಿ. ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು. ಇಂದು ನೇತಾಜಿ ಸುಭಾಷ್ ಬೋಸ್ ಅವರ ಜನ್ಮದಿನ. ದೇಶವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುತ್ತದೆ ಇದೊಂದು ಐತಿಹಾಸಿಕ ದಿನ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರಿಡುವ ಬಗ್ಗೆ ಮಾತನಾಡಿ, ದೇಶದ ನಿಜ ಜೀವನದ ಹೀರೋಗಳಿಗೆ ಸರಿಯಾದ ಗೌರವವನ್ನು ನೀಡುವುದು ಯಾವಾಗಲೂ ಪ್ರಧಾನ ಮಂತ್ರಿಯಿಂದ ಹೆಚ್ಚಿನ ಆದ್ಯತೆಯನ್ನು ಪಡೆದಿದೆ. ಈ ಸ್ಫೂರ್ತಿಯೊಂದಿಗೆ ಮುಂದುವರಿಯುತ್ತಾ, ದ್ವೀಪ ಸಮೂಹದ 21 ದೊಡ್ಡ ಹೆಸರಿಸದ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

ಸುಭಾಷ್ ಚಂದ್ರ ಬೋಸ್ ರಾಷ್ಟ್ರೀಯ ಸ್ಮಾರಕ ಮ್ಯೂಸಿಯಂ, ಕೇಬಲ್ ಕಾರ್ ರೋಪ್‍ವೇ, ಲೇಸರ್ ಮತ್ತು ಸೌಂಡ್ ಶೋ, ಐತಿಹಾಸಿಕ ಕಟ್ಟಡಗಳ ಮೂಲಕ ಮಾರ್ಗದರ್ಶಿ ಹೆರಿಟೇಜ್ ಟ್ರಯಲ್ ಮತ್ತು ಥೀಮ್ ಆಧಾರಿತ ಮಕ್ಕಳ ಅಮ್ಯೂಸ್‍ಮೆಂಟ್ ಪಾರ್ಕ್ ಜೊತೆಗೆ ರೆಸ್ಟ್ರೋ ಲಾಂಜ್ ಅನ್ನು ಹೊಂದಿರಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *