ಹುಬ್ಬಳ್ಳಿ: ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇಟ್ಟುಕೊಂಡು ಬಂದಿದ್ದವನಿಗೆ ಸಿಸಿಬಿ ಪೊಲೀಸ್ ಬಲೆ ಬೀಸಿ ಬಂಧಿಸಿರುವ ಘಟನೆ ಹುಬ್ಬಳ್ಳಿ ನಡೆದಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಅಕ್ರಮ ಚಿನ್ನದ ಬೇಟೆಯಾಡಿದ್ದಾರೆ. ಹುಬ್ಬಳ್ಳಿ ನಗರದ ಗಿರಣಿ ಚಾಳದ ಏಳು ಮಕ್ಕಳ ತಾಯಿ ದೇವಸ್ಥಾನದ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ 38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂಓದಿ: ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?
ಚೇತನ ದೇವೆಂದ್ರಪ್ಪ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿ ಕೇಶ್ವಾಪುರ ಮಧುರಾ ಎಸ್ಟೇಟ್ ನಿವಾಸಿಯಾಗಿದ್ದಾನೆ. ತನ್ನ ಪ್ಯಾಂಟ್‍ನ ಬೆಲ್ಟ್‍ನಲ್ಲಿ ಈ ಚಿನ್ನ ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಗೆ ಹಿಡಿದು ತಪಾಸಣೆ ಮಾಡಿದಾಗ ಪ್ಯಾಂಟಿನ ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು
38 ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ಆರೋಪಿಯಿಂದ ವಶಕ್ಕೆ ಬರೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಮ್ಮ ರಚನಾತ್ಮಕ ಸಲಹೆಗಳನ್ನು ಚೀನಾ ಒಪ್ಪಿಲ್ಲ: ಭಾರತೀಯ ಸೇನೆ