ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ಚಿರತೆ (Leopard) ಆತಂಕ ಮನೆ ಮಾಡಿದೆ. ಬೆಂಗಳೂರು (Bengaluru) ನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಚಿರತೆ ಕಂಡುಬಂದಿದ್ದು, ಕೆಲವರಿಗೆ ದಾಳಿ ನಡೆಸಿ ಬಲಿ ಪಡೆದಿದೆ. ಇದೀಗ ಚಿರತೆ ದಾಳಿಯಲ್ಲಿ ಮೃತಪಟ್ಟವರಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) 15 ಲಕ್ಷ ರೂ. ಪರಿಹಾರ (Compensation) ಘೋಷಿಸಿದ್ದಾರೆ.
Advertisement
ಚಿರತೆ ದಾಳಿಯಿಂದಾಗಿ ಮೈಸೂರಿನಲ್ಲಿ (Mysuru) ನಿನ್ನೆ ಎರಡನೇ ಬಲಿಯಾಗಿತ್ತು. ಈ ಬೆನ್ನಲ್ಲೇ ಚಿರತೆ ಕುರಿತಾಗಿ ಗಂಭೀರವಾಗಿ ಪರಿಗಣಿಸಿರುವ ಸಿಎಂ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಚಿರತೆ ಹಾವಳಿಯನ್ನು ಅರಣ್ಯ ಇಲಾಖೆ (Forest Department) ಗಂಭೀರವಾಗಿ ಪರಿಗಣಿಸಿದ್ದೇವೆ. ಚಿರತೆಯನ್ನು ಜೀವಂತ ಹಿಡಿದು ಅರಣ್ಯಕ್ಕೆ ಬಿಡುವಂತೆ ಸೂಚಿಸಿದ್ದೇವೆ. ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಹಿಂದೆ ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುತ್ತಿದ್ದಂತೆ ಪರಿಹಾರ ಇದೀಗ ಚಿರತೆ ದಾಳಿಯಿಂದ ಮೃತಪಟ್ಟವರಿಗೂ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ
Advertisement
Advertisement
ಮೊದಲು ಚಿರತೆ ಹಾವಳಿ ಕಾಡುಪಕ್ಕದಲ್ಲಿ ಅಲ್ಲಲ್ಲಿತ್ತು. ಈಗ ಬೆಂಗಳೂರು ಅಕ್ಕ ಪಕ್ಕವೇ ಹಾವಳಿ ಆಗ್ತಿದೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಚಿರತೆ ಹಿಡಿಯಲು ಬೋನ್ ಇಟ್ಟು ಕಾಯಲಾಗುತ್ತಿದೆ. ವಿಶೇಷ ತಂಡ ರಚಿಸಿ ಬದ್ಧತೆಯಿಂದ ಕಾರ್ಯಾಚರಣೆ ನಡೆಸಲು ಸೂಚಿಸಿದ್ದೇನೆ. ಎಲಿಫೆಂಟ್ ಕಾರಿಡಾರ್ ಸುತ್ತಲೂ ಚಿರತೆ ಇದೆ. ಕಾಡು ಬಿಟ್ಟು ಬಂದಿರುವ ಚಿರತೆಗಳನ್ನು ಹಿಡಿಯಲು ವಿಶೇಷ ತಂಡ ರಚಿಸಲು ಸೂಚಿಸಲಾಗಿದೆ. ಮೃತಪಟ್ಟ ಕುಟುಂಬದವರಿಗೆ ಆನೆ ದಾಳಿಯಲ್ಲಿ ಮೃತಪಟ್ಟವರಿಗೆ ಕೊಡುವ ಮಾದರಿಯಲ್ಲಿ 15 ಲಕ್ಷ ಪರಿಹಾರ ಕೊಡ್ತೇವೆ. ಇದನ್ನೂ ಓದಿ: ರೌಡಿಶೀಟರ್ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆ
Advertisement
ಇದೇ ಸಂದರ್ಭ ಮೈಸೂರಿನಲ್ಲಿ ಚಿರತೆ ದಾಳಿಯಿಂದ ಮೃತಪಟ್ಟಿದ್ದ ನರಸೀಪುರದ ಕೆಬ್ಬೇಹುಂಡಿ ಗ್ರಾಮದ ಯುವತಿ ಕುಟುಂಬಕ್ಕೆ ಸಿಎಂ 15 ಲಕ್ಷ ರೂ. ಪರಿಹಾರ ಘೋಷಿಸಿದರು.