ಕಠ್ಮಂಡು: ಲಲಿತ್‍ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನೇಪಾಳದ ಕಠ್ಮಂಡುವಿನಲ್ಲಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ.
ಈ ಕುರಿತು ಅಲ್ಲಿನ ಎಲ್‍ಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಾನಿಪುರಿಯಲ್ಲಿ ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಂಡುಬಂದಿದೆ. ಇದರಿಂದಾಗಿ ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯದ ಪ್ರಕಾರ, ದೇಶದಲ್ಲಿ ಒಟ್ಟು 17 ಕಾಲರಾ ರೋಗಿಗಳಿದ್ದಾರೆ. ಇದೀಗ ಕಠ್ಮಂಡುವಿನಲ್ಲಿ ಇನ್ನೂ 7 ಜನರಿಗೆ ಕಾಲರಾ ದೃಢವಾಗಿದೆ. ಈ 7 ಪ್ರಕರಣಗಳಲ್ಲಿ 5 ಪ್ರಕರಣಗಳು ಕಠ್ಮಂಡು ಮಹಾನಗರದಲ್ಲಿ ಮತ್ತು ಚಂದ್ರಗಿರಿ ಪುರಸಭೆ ಮತ್ತು ಬುಧಾನಿಲಕಂಠ ಪುರಸಭೆಯಲ್ಲಿ ತಲಾ ಒಂದು ಪ್ರಕರಣಗಳು ವರದಿ ಆಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್
ಈ ಹಿನ್ನೆಲೆಯಲ್ಲಿ ಕಾಲರಾ ಹರಡುವುದನ್ನು ನಿಯಂತ್ರಿಸಲು ಪಾನಿಪುರಿ ಮಾರಾಟವನ್ನು ನಿಲ್ಲಿಸಲು ಮಹಾನಗರ ಪಾಲಿಕೆ ಸಿದ್ಧತೆಯನ್ನು ನಡೆಸಿದೆ. ಸೋಂಕಿತ ಜನರು ಪ್ರಸ್ತುತ ಟೇಕುನಲ್ಲಿರುವ ಸುಕ್ರರಾಜ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪೈಥಾನ್ ಬಳಸಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ಫುಲ್ ಕ್ಲಾಸ್