ಇತ್ತೀಚೆಗೆ ಕ್ರಿಕೆಟ್ (Cricket) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸುದ್ದಿ ಅಂದ್ರೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya) ದಾಂಪತ್ಯ ಜೀವನ ಮುರಿದ ಬೀಳುವ ಹಂತದಲ್ಲಿದ್ದ ಸಂಗತಿ. ಈ ಬಗ್ಗೆ ಹಾರ್ದಿಕ್ ಆಗಲಿ ಪತ್ನಿ ನತಾಶಾ (Natasha) ಆಗಲಿ ಯಾವ ವಿಚಾರವನ್ನೂ ಬಾಯ್ಬಿಟ್ಟು ಹೇಳದಿದ್ದರೂ ದಂಪತಿ ನಡವಳಿಕೆ, ಇನ್ಸ್ಟಾದಲ್ಲಿ ಹಾಕುತ್ತಿದ್ದ ಸ್ಟೋರಿಸ್ ಈ ಬಗ್ಗೆ ಸುಳಿವು ನೀಡಿತ್ತು. ಇದರಲ್ಲೂ ವಿಚ್ಛೇದನದ ಪರಿಹಾರವಾಗಿ ನತಾಶಾ, ಪತಿ ಹಾರ್ದಿಕ್ ಪಾಂಡ್ಯ ಆಸ್ತಿಯ ಶೇಕಡಾ 70ರಷ್ಟು ಭಾಗ ಕೇಳಿದ್ದಾರೆ ಅನ್ನೋ ವದಂತಿಯಂತೂ ಪಾಂಡ್ಯ ಅಭಿಮಾನಿಗಳನ್ನ ರೊಚ್ಚಿಗೇಳುವಂತೆ ಮಾಡಿತ್ತು. ಆದರೆ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪಾಂಡ್ಯ ಫ್ಯಾನ್ಸ್ ನಿಟ್ಟುಸಿರು ಬಿಡುವಂತಹ ಬೆಳವಣಿಗೆಯಾಗಿದೆ.
ಇನ್ನೇನು ಹಾರ್ದಿಕ್ ಪಾಂಡ್ಯ- ನತಾಶಾ ದೂರಾಗೇಬಿಟ್ಟರು ಎನ್ನುವ ವೇಳೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದಂಪತಿ ಮುನಿಸು ಮರೆತು ಒಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ಎನ್ನುವಂತೆ ನತಾಶಾ ಸೋಷಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದ ಮದುವೆ ಫೋಟೋಗಳನ್ನ ಹಿಂಪಡೆದಿದ್ದಾರೆ. ಇತ್ತೀಚೆಗೆ ಮಾಧ್ಯಮದ ಮುಂದೆ ನತಾಶಾ ಕಾಣಿಸ್ಕೊಂಡಾಗ ಡಿವೋರ್ಸ್ ಬಗ್ಗೆ ಪ್ರಶ್ನೆ ಎದುರಾಗಿದ್ದರೂ ಏನನ್ನೂ ಹೇಳದೆ ಮುಂದೆ ಸಾಗಿದ್ದರು. ಅವರೊಟ್ಟಿಗೆ ಜಿಮ್ ಟ್ರೈನರ್ ಕೂಡ ಇದ್ರು. ಅವರನ್ನೇ ನತಾಶಾಳ ಹೊಸ ಬಾಯ್‌ಫ್ರೆಂಡ್ ಎಂದು ಅನುಮಾನಪಡಲಾಗಿತ್ತು. ಆದರೆ ನತಾಶಾ ನಡೆಗೆ ತೀವ್ರ ವಿರೋಧ ಬಂದ ಹಿನ್ನೆಲೆ ಹಾಗೂ ಮಗುವಿನ ಭವಿಷ್ಯಕ್ಕಾಗಿ ವಿಚ್ಛೇದನ ನಿರ್ಧಾರ ಹಿಂದಪಡೆದಿದ್ದಾರೆ ದಂಪತಿ ಎನ್ನಲಾಗುತ್ತಿದೆ.
ಸೆರ್ಬಿಯನ್ ಮೂಲದ ಡಾನ್ಸರ್ ಕಂ ಮಾಡೆಲ್ ಆಗಿದ್ದ ನತಾಶಾ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಕನ್ನಡದ ದನಕಾಯೋನು ಚಿತ್ರದ ಹಾಡೊಂದಕ್ಕೂ ಹೆಜ್ಜೆ ಹಾಕಿದ್ದರು. ಹೀಗೆ ಸಿನಿಮಾರಂಗದಲ್ಲಿದ್ದಾಗಲೇ ಹಾರ್ದಿಕ್ ಪಾಂಡ್ಯ ಜೊತೆ ಪರಿಚಯ ಪ್ರೀತಿ ಬೆಳದಿತ್ತು. ಇಬ್ಬರೂ ಸಹಜೀವನ ನಡೆಸಿ ಮಗುವನ್ನೂ ಪಡೆದುಕೊಂಡ್ರು. ಈ ದಂಪತಿಗೆ ಅಗಸ್ತ್ಯ ಹೆಸರಿನ ನಾಲ್ಕು ವರ್ಷದ ಗಂಡು ಮಗುವಿದೆ. ಮಗನಿಗೆ ಎರಡು ವರ್ಷವಿದ್ದಾಗ ಮಗುವಿನ ಮುಂದೇ ಈ ದಂಪತಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರ್ತಾರೆ. ನಟ ಯಶ್ ಸೇರಿ ಹಲವು ಬಾಲಿವುಡ್ ನಟ ನಟಿಯರು ಕ್ರಿಕೆಟ್ ತಾರೆಯರೂ ಅದ್ದೂರಿ ಮದುವೆಗೆ ಸಾಕ್ಷಿಯಾಗಿರ್ತಾರೆ. ಹೀಗೆ ವೈಯಕ್ತಿಕ ಜೀವನದಿಂದ ಈ ಜೋಡಿ ಬಹಳವೇ ಚರ್ಚೆಯಲ್ಲಿರುತ್ತೆ. ಹಾರ್ದಿಕ್ ಕುಟುಂಬದ ಜೊತೆ ನತಾಶಾ ಹೊಂದಿಕೊಂಡು ಕೂಡಿ ಬಾಳುವ ವಿಚಾರವನ್ನು ಇನ್ಸ್ಟಾದಲ್ಲಿ ದಂಪತಿ ಅಪ್‌ಲೋಡ್ ಮಾಡುತ್ತಿದ್ದ ಫೋಟೋಗಳು ಸಾಕ್ಷಿ ಹೇಳುತ್ತಿದ್ದವು. ಈ ನಡುವೆಯೇ ದಿಢೀರ್ ಎಂದು ವಿಚ್ಛೇದನದ ಸುದ್ದಿ ತೂರಿಬಂತು. ಇದೀಗ ವಿಚ್ಛೇದನ ಕೈಬಿಟ್ಟಿರುವ ವಿಚಾರವೂ ಚರ್ಚೆಯಾಗುತ್ತಿದೆ..