– ಡಿಜಿ, ಐಜಿ ಗೊತ್ತು ಎಂದು ಫೋನ್‍ನಲ್ಲೇ ದರ್ಪ ಮೇರೆದ ಮಾಲೀಕ!
ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶಕ್ಕೆ ನಷ್ಟವಾದರೂ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಆದರೆ ದೊಡ್ಡವರ ಮಕ್ಕಳು ಮಾತ್ರ ಲಾಕ್‍ಡೌನ್ ಕಾನೂನನ್ನೇ ಉಲ್ಲಂಘಿಸಿ ತಮ್ಮಿಚ್ಚೆಯಂತೆ ಓಡಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಕೊಡಗು ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ.
Advertisement
ನಿವೃತ್ತ ಪೊಲೀಸ್ ಅಧಿಕಾರಿ ಎನ್ನಲಾಗಿರುವ ನವೀನ್ ಚೆಲ್ಲಮ್ ಎಂಬುವವರ ಮಗ ರೋಷನ್ ಬೆಂಗಳೂರಿನ ತನ್ನ ಇಬ್ಬರು ಸ್ನೇಹಿತರಾದ ಬೆಂಗಳೂರಿನ ಗೌಡನಪಾಳ್ಯದ ಸುಜನ್ ಮತ್ತು ಜಯನಗರದ ರಘುರಾಮ್ ಜೊತೆಗೆ ಕೊಡಗಿನಲ್ಲಿರುವ ತಮ್ಮದೇ ರೆಸಾರ್ಟಿಗೆ ಬಂದು ಎಂಜಾಯ್ ಮಾಡಲು ಮುಂದಾಗಿದ್ದು ಬಯಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗದೂರಿನಲ್ಲಿರುವ ವುಡ್ ಪೇಕರ್ ಎಂಬ ಹೋಂ ಸ್ಟೇಂಗೆ ಬುಧವಾರ ಸಂಜೆ ಬಂದಿದ್ದಾರೆ. ಬಳಿಕ ಅಂದು ರಾತ್ರಿಯೇ ಡಿಜೆ ಸೌಂಡ್ ಹಾಕಿ ಎಂಜಾಯ್ ಮಾಡಿರೋದು ಊರಿನವರಿಗೆ ಗೊತ್ತಾಗಿದೆ.
Advertisement
Advertisement
ಇದರಿಂದ ಎಚ್ಚೆತ್ತುಕೊಂಡ ಊರಿನವರು ನವೀನ್ ಚೆಲ್ಲಮ್ ಅವರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ ನವೀನ್ ಚೆಲ್ಲಮ್ ನನಗೆ ಐಜಿ ಗೊತ್ತು, ಸಿಎಂ ಗೊತ್ತು. ನನ್ನ ತಂಟೆಗೆ ಯಾರೇ ಬಂದರೂ ಅವರಿಗೆ ಬೂಟ್ ಕಾಲಿನಲ್ಲಿ ಒದ್ದು ಕೇಸ್ ಹಾಕಿ ಬಿಡ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ನನ್ನ ಮಗ ಅಷ್ಟೇ ಅಲ್ಲ ಮುಂದಿನ ವಾರದಲ್ಲಿ ಐಜಿ ಜೊತೆಗೆ ಇನ್ನೂ ಮೂರು ಜನರನ್ನು ಅಲ್ಲಿಗೆ ಕರೆದುಕೊಂಡು ಬರುತ್ತೇನೆ. ಆವಾಗ ಅದ್ಯಾವನು ಏನ್ ಮಾಡ್ತಾನೋ ಮಾಡ್ಲಿ ಎಂದು ಊರಿನವರಿಗೆ ಧಮ್ಕಿ ಹಾಕಿದ್ದಾರೆ. ಇದೆಲ್ಲವೂ ಫೋನ್‍ನಲ್ಲಿ ರೆಕಾರ್ಡ್ ಆಗಿದೆ.
Advertisement
ವಿಷಯ ತಿಳಿದು ಹರದೂರು ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಟಾಸ್ಕ್ ಪೋರ್ಸ್ ಟೀಂ ಇಂದು ಹೋಂ ಸ್ಪೇಗೆ ಬೀಗ ಜಡಿದು ಸೀಲ್ ಮಾಡಿದ್ದಾರೆ. ಬುಧವಾರ ಸಂಜೆ ಬಂದು ಹೋಂ ಸ್ಟೇನಲ್ಲಿ ತಂಗಿದ್ದು ನಿನ್ನೆಯೇ ಅಧಿಕಾರಿಗಳು ಹೋಂ ಸ್ಟೇ ಬಳಿಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡದೆ ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಸದ್ಯ ಅಧಿಕಾರಿಗಳ ನಡೆಯ ಮೇಲೆ ಸಾಕಷ್ಟು ಅನುಮಾನ ಮೂಡಿಸಿದೆ.