Belgaum

ಎಸಿಬಿ ಬಲೆಗೆ ಬಿದ್ದ ಗುಡಸ ಗ್ರಾಮ ಪಂಚಾಯತ್ ಗುಮಾಸ್ತ

Published

on

Share this

ಚಿಕ್ಕೋಡಿ: ಹುಕ್ಕೇರಿ ತಾಲೂಕು ಗುಡಸ ಗ್ರಾಮ ಪಂಚಾಯತಿಯ ಗುಮಾಸ್ತ ಲಂಚ ಪಡೆಯುತ್ತಿರುವ ವೇಳೆ ಭ್ರಷ್ಟಾಚಾರ ನಿರ್ಮೂಲನಾ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಗುಡಸ್ ಗ್ರಾಮ ಪಂಚಾಯತಿಯಲ್ಲಿ ಗುಮಾಸ್ತ ಹಾಗೂ ಬಿಲ್ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದಗೌಡ ನೇರ್ಲಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟಾ ಅಧಿಕಾರಿ. ಆಪಾದಿತ ಆಸ್ತಿ ರಿಜಿಸ್ಟರ್ ನಲ್ಲಿ ಅರ್ಜಿದಾರರೊಬ್ಬರ ಹೆಸರು ದಾಖಲಿಸಲು 7,400 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತಂತೆ ಅರ್ಜಿದಾರ ಭೀಮಪ್ಪ ಕಲಕುಟಗಿ ಎಸಿಬಿಗೆ ದೂರು ಸಲ್ಲಿಸಿದ್ದು, ಹಣ ಪಡೆಯುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿದ್ದಗೌಡ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆ ಆರೋಪಿಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನೂ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಅತ್ಯಾಚಾರದ ಆರೋಪ- ವಾಯುಸೇನೆ ಅಧಿಕಾರಿ ಅರೆಸ್ಟ್

ಎಸಿಬಿ ಎಸ್‍ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ್ ಗುದಿಗೊಪ್ಪ ಹಾಗೂ ಸುನಿಲಕುಮಾರ್ ಸೇರಿದಂತೆ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications