– ಹೆಚ್‌ಡಿಕೆಗೆ ಕೊತ್ತಂಬರಿ, ಸೌತೆಕಾಯಿ, ಕಬ್ಬು ಮೋಸಂಬಿ ಸೇರಿ ಹಲವು ಬಗೆಯ ಹಾರ
– ಅಭಿಮಾನಿಗಳ ಹಾರೈಕೆ, ಹೆಚ್‌ಡಿಕೆ ಕೃತಜ್ಞತೆ
– ಅಭಿಮಾನಿಗಳ ಹಾರೈಕೆ, ಹೆಚ್‌ಡಿಕೆ ಕೃತಜ್ಞತೆ
ತುಮಕೂರು: 2023ರ ವಿಧಾನಸಭಾ ಚುನಾವಣಾ (Assembly Election 2023) ಪ್ರಚಾರದ ಭಾಗವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ನಡೆಯುತ್ತಿರುವ `ಪಂಚರತ್ನ ಯಾತ್ರೆ’ಯಲ್ಲಿ (PanchaRatna Yatra) ವಿವಿಧ ಬಗೆಯ ಹಾರಗಳು ಗಮನ ಸೆಳೆದಿವೆ. ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹಾಕಿರುವ ಸುಮಾರು 500 ಬಗೆಯ ವಿಭಿನ್ನ ಹಾರಗಳು ಗಿನ್ನಿಸ್ ದಾಖಲೆ ಮಾಡಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ (Asia Book Of Records) ಸೇರಿವೆ.
Advertisement
ಕೊತ್ತಂಬರಿ, ಮೋಸಂಬಿ, ಕಬ್ಬು, ಸೌತೆಕಾಯಿ, ಸೇಬು, ದಾಳಿಂಬೆ ಸೇರಿದಂತೆ ಪಂಚರತ್ನ ಯಾತ್ರೆಯಲ್ಲಿ ಅಭಿಮಾನಿಗಳು 500ಕ್ಕೂ ಹೆಚ್ಚು ಬಗೆಯ ಹಾರಗಳನ್ನು ಹಾಕಿದ್ದು, ಗಿನ್ನಿಸ್ ದಾಖಲೆಯಾಗಿದೆ. ಇದು ಏಷ್ಯಾ (Asia Book Of Records) ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book Of Records) ಸೇರಿದೆ. ಇಡೀ ದೇಶದಲ್ಲಿ ಇಷ್ಟು ಬಗೆಯ ಹಾರಗಳನ್ನು ಹಾಕಿದ್ದು ಇದೇ ಮೊದಲಾಗಿದೆ. ಹಾಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್‌ನ ಪ್ರಮುಖರು ಹೆಚ್‌ಡಿಕೆಗೆ ಮೆಡಲ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಪತ್ನಿ ದೀಪಿಕಾಗಾಗಿ 119 ಕೋಟಿ ಬೆಲೆ ಮನೆ ಖರೀದಿಸಿದ ರಣ್ವೀರ್ ಸಿಂಗ್
Advertisement
Advertisement
ಲಿಂಗಾಯತ, ಒಕ್ಕಲಿಗರನ್ನ ಮಂಗ ಮಾಡಿದ್ದಾರೆ: ತುಮಕೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಿಎಂ, ಮೀಸಲಾತಿ (Reservation) ವಿಚಾರದಲ್ಲಿ ಬಿಜೆಪಿ (BJP) ವಿರುದ್ಧ ಕಿಡಿ ಕಾರಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಇದೆ. ಕೆಲವು ಮಾರ್ಪಾಡು ಮಾಡಿಕೊಂಡಿದ್ದಾರೆ. ವೀರೇಶ್ವರ ಲಿಂಗಾಯತ ಹಾಗೂ ಒಕ್ಕಲಿಗರನ್ನು ಮಂಗ ಮಾಡಿದ್ದಾರೆ. 3ಎ ಹಾಗೂ 3ಬಿ ಪ್ರವರ್ಗವನ್ನ ಸೈಲೆಂಟ್ ಮಾಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಳಿ ಸೀರೆಯೊಂದಿಗೆ ಕರವಸ್ತ್ರ ಯಾವಾಗ್ಲೂ ಇರುತ್ತಿತ್ತು- ಹೀರಾಬೆನ್ ಕುತೂಹಲಕಾರಿ ಸಂಗತಿ
Advertisement
ಇವರು ಮೀಸಲಾತಿ ಕೊಡುವಷ್ಟರಲ್ಲಿ ಸರ್ಕಾರವೇ ಇರಲ್ಲ. ಉತ್ತರಪ್ರದೇಶದಲ್ಲಿ ಈಗಾಗಲೇ ಹೈಕೋರ್ಟ್ ಮೀಸಲಾತಿ ತಿರಸ್ಕಾರ ಮಾಡಿದೆ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು. ಬಿಜೆಪಿಯವರು ಚುನಾವಣೆಗಾಗಿ ಈ ರೀತಿ ಮಾಡುತಿದ್ದಾರೆ. ಪಂಚಮ ಸಾಲಿಗರು 2ಎ ಸೇರಿಸಿ ಎಂದು ಬೇಡಿಕೆಯಿಟ್ಟರೆ, 2ಡಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ತೆಗೆದುಕೊಂಡ ಈ ತೀರ್ಮಾನ ಹಲವು ಜನಾಂಗವನ್ನು ಎತ್ತಿಕಟ್ಟುವಂತಾಗಿದೆ. ಮೀಸಲಾತಿ ಅನ್ನೋದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲ ಆಗಬೇಕು, ಆದ್ರೆ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಜನತೆಗೆ ದ್ರೋಹ ಬಗೆದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ತಾಯಿ ಅಗಲಿಕೆಗೆ ಹೆಚ್‌ಡಿಕೆ ಕಂಬನಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ ಅವರ ಬಿಡುವಿಲ್ಲದ ದಿನಚರಿಯಲ್ಲಿ ತಾಯಿ ಬಗ್ಗೆ ತೋರಿದ ಅಕ್ಕರೆ ಮಾದರಿಯಾಗಿದೆ. ಅವರಿಗೆ ಆ ದುಃಖ ತಡೆಯುವ ಶಕ್ತಿ ಭಗವಂತ ನೀಡಲಿ. ಹೀರಾಬೇನ್ ಶತಾಯುಷಿಯಾಗಿ ಅಗಲಿದ್ದಾರೆ. ಮೋದಿ ಅವರು ದುಃಖದಿಂದ ಹೊರಗೆ ಬಂದು ದೇಶ ಸೇವೆಗೆ ಮರಳಲಿ ಎಂದು ಕೋರುತ್ತೇನೆ ಎಂದು ಭಾವುಕರಾದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]