ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆಯಾಗಿ ನಾಲ್ಕು ವರ್ಷಗಳು ಕಳೆದಿವು. ಇದೇ ಮೊದಲ ಬಾರಿಗೆ ಪತ್ನಿಗಾಗಿ ಭಾರೀ ಬೆಲೆಬಾಳುವ ಮನೆಯನ್ನು ಗಿಫ್ಟ್ ಮಾಡಿದ್ದಾರಂತೆ ರಣ್ವೀರ್ ಸಿಂಗ್. ಪತ್ನಿ ದೀಪಿಕಾಗೆ ಅವರು ಬರೋಬ್ಬರಿ 119 ಕೋಟಿ ಬೆಲೆಬಾಳುವ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಆಧುನಿಕ ಸವಲತ್ತುಗಳು ಇರುವಂತಹ ಮನೆ ಇದಾಗಿದ್ದು, ತಮ್ಮಿಷ್ಟದಂತೆ ಒಳವಿನ್ಯಾಸವನ್ನೂ ಅವರು ಮಾಡಿಸಿದ್ದಾರಂತೆ.
Advertisement
ದುಬಾರಿ ಈ ಮನೆಯು ಮುಂಬೈನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಿವಾಸಕ್ಕೆ ತುಂಬಾ ಹತ್ತಿರವಾಗಿದೆ ಎಂದು ಹೇಳಲಾಗಿದ್ದು, 11,266 ಚದರಡಿಯನ್ನು ಇದು ಹೊಂದಿದೆಯಂತೆ. ಐಷಾರಾಮಿ ಮನೆಗೆ ಹೊಸ ರೀತಿಯ ವಿನ್ಯಾಸವನ್ನು ಈ ಜೋಡಿ ಮಾಡಿಸಿದೆಯಂತೆ. ವಿಶಾಲವಾದ ಟೆರೆಸ್ ಹೊಂದಿರುವ ಮನೆ ಇದಾಗಿದ್ದು, ಜಿಮ್, ಈಜುಗೊಳ ಸೇರಿದಂತೆ ಹೈಟೆಕ್ ಸವಲತ್ತುಗಳನ್ನು ಇದು ಹೊಂದಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?
Advertisement
Advertisement
ಹೊಸ ವರ್ಷದ ಆಚರಣೆಗೆಂದು ಸದ್ಯ ಈ ಜೋಡಿಯು ವಿದೇಶಕ್ಕೆ ಹಾರಿದ್ದು, ಸದ್ಯದಲ್ಲೇ ಹೊಸಮನೆಗೆ ಪ್ರವೇಶ ಕೂಡ ಮಾಡಲಿದ್ದಾರೆ. ಪಠಾಣ್ ಚಿತ್ರದ ವಿವಾದದಿಂದ ದೀಪಿಕಾ ಹಾಗೂ ಸರ್ಕಸ್ ಸೋಲಿನ ನೋವಿನಲ್ಲಿರುವ ರಣ್ವೀರ್ ಸಿಂಗ್, ಈ ಮನೆಯಲ್ಲಿ ನೆಮ್ಮದಿಯ ದಿನಗಳನ್ನು ಕಳೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಅಲ್ಲದೇ, ಮತ್ತೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.