ದಾವಣಗೆರೆ: ವಚನಾನಂದ ಶ್ರೀಗಳು (Vachanananda Sri) ಪಂಚಮಸಾಲಿ ಸಮಾಜದಿಂದ ನಡೆಯುತ್ತಿರುವ ಮೀಸಲಾತಿ ಹೋರಾಟದಲ್ಲಿ (Panchamasali Protest) ಭಾಗಿಯಾಗಿ ಸಮಾಜದ ಋಣ ತೀರಿಸಬೇಕು ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ (Belagavi) ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆದ ಹಿನ್ನಲೆ, ರಾಜ್ಯಾದ್ಯಂತ ಕೂಡಲಸಂಗಮ ಶ್ರೀಗಳು ಪ್ರತಿಭಟನೆಗೆ ಕರೆ ನೀಡಿದ್ದರು. ದಾವಣಗೆರೆಯಲ್ಲಿ ಈ ಪ್ರತಿಭಟನೆಯ ಮುಖಂಡತ್ವವನ್ನು ಶಿವಶಂಕರ್ ವಹಿಸಿದ್ದು, 500ಕ್ಕೂ ಹೆಚ್ಚು ಪ್ರತಿಭಟನಾಕಾರರು ರ್ಯಾಲಿಯಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೂಡಲಸಂಗಮ ಶ್ರೀಗಳು ಮಠವನ್ನು ಬಿಟ್ಟು ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಸಿಗುವವರೆಗೂ ಮಠ ಸೇರುವುದಿಲ್ಲ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಎಸಿ ರೂಮ್‍ನಲ್ಲಿ ಕುಳಿತು ಪ್ರತಿಭಟನೆ ಬಗ್ಗೆ ಮಾತನಾಡುವುದಲ್ಲ. ಸಮಾಜದ ಹೋರಾಟದಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ. ಬರಿ ಎಸಿ ರೂಮ್‍ನಲ್ಲಿ ಇರೋದಲ್ಲ ಎಂದು ವಚನಾನಂದ ಸ್ವಾಮೀಜಿಗಳ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.