ಬೆಂಗಳೂರು: ಪಾಲರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಹಾಗು ವೀರಪ್ಪನ್ ಸಹಚರ ಸೈಮನ್ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿರುವ ಸೈಮನ್ ಮಾದಯ್ಯ 1993 ರಲ್ಲಿ ಐಪಿಎಸ್ ಆಧಿಕಾರಿ ರಾಂಬೋ ಗೋಪಾಲಕೃಷ್ಣ ಸೇರಿದಂತೆ 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವಿಗೆ ಕಾರಣನಾಗಿದ್ದನು. ರಾಂಬೋ ಗೋಪಾಲಕೃಷ್ಣ ತಮ್ಮ ತಂಡದೊಂದಿಗೆ ಕಾಡುಗಳ್ಳ ವೀರಪ್ಪನನ್ನು ಹಿಡಿಯಲು ಸೊರ್ ಕಾಯ್‍ಮಡು ಅರಣ್ಯಕ್ಕೆ ತೆರಳಿದ್ದರು.
Advertisement
ಈ ವೇಳೆ ನೆಲಬಾಂಬ್ ಸ್ಫೋಟಿಸುವುದರಲ್ಲಿ ಪ್ರವೀಣನಾಗಿದ್ದ ಸೈಮನ್ ಮಾದಯ್ಯನಿಗೆ ಹೇಳಿ ವೀರಪ್ಪನ್ ಸೂರ್‍ಕಾಯ್‍ಮಡುವಿನ ಬಾಂಬ್ ಹೂತಿಡಿಸಿದ್ದ. ರಾಂಬೋ ಗೋಪಾಲಕೃಷ್ಣ ಅರಣ್ಯ ಪ್ರದೇಶಕ್ಕೆ ಕಾಲಿಡುತ್ತಿದ್ದಂತೆ 14 ಕಡೆ ಬಾಂಬ್ ಸ್ಫೋಟ ನಡೆಸಿದ್ದನು. ಘಟನೆಯಲ್ಲಿ ಒಟ್ಟು 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವನ್ನಪಿದ್ರು.
Advertisement
ಈ ಪ್ರಕರಣ ಸಂಬಂಧ ಸೈಮನ್ ಮಾದಯ್ಯ ಸೇರಿದಂತೆ 4 ಜನರಿಗೆ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ವಿಧಿಸಿತು. ಅಂದಿನಿಂದ ಜೈಲು ಹಕ್ಕಿಯಾಗಿದ್ದ ಸೈಮನ್ ಮಾದಯ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇಂದು ಬೆಳಗ್ಗೆ ಮೃತ ಪಟ್ಟಿದ್ದಾನೆ.