ಪನೀರ್ನಲ್ಲಿ ಸಾಕಷ್ಟು ಪೋಷಕಾಂಶವಿರುತ್ತೆ. ಇತ್ತೀಚೆಗೆ ಪನೀರ್ನಲ್ಲಿ ಮಾಡುವ ಎಲ್ಲ ತಿನಿಸುಗಳು ಸಖತ್ ಟ್ರೆಂಡಿಯಾಗುತ್ತಿದೆ. ಇಂದು ನಾವು ನಿಮಗೆ ಹೆಚ್ಚು ಪ್ರಚಲಿತದಲ್ಲಿರುವ ‘ಪಾಲಕ್ ಪನೀರ್’ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಇದನ್ನು ಮಾಡುವುದು ತುಂಬಾ ಸುಲಭವಾಗಿರುತ್ತೆ.
Advertisement
ಬೇಕಾಗಿರುವ ಪದಾರ್ಥಗಳು:
* ಒಂದು ಕಟ್ಟು ಪಾಲಕ್ ಸೊಪ್ಪು
* ಕಟ್ ಮಾಡಿದ ಟೊಮೆಟೊ – 1
* ಬೆಳ್ಳುಳ್ಳಿ, ಲವಂಗವನ್ನು – 5
* ಶುಂಠಿ – 1 ಇಂಚು
* ಹಸಿರು ಮೆಣಸಿನಕಾಯಿ – 1
*ಎಣ್ಣೆ – 2 ಚಮಚ
Advertisement
Advertisement
* ಕಟ್ ಮಾಡಿದ ಈರುಳ್ಳಿ – 1
* ನೀರು – 1/2 ಕಪ್
* ಗರಂ ಮಸಾಲಾ – 3/4-1 ಟೀ ಚಮಚ
* ಅರಿಶಿನ ಪುಡಿ – 1/4 ಟೀ ಚಮಚ
* ಕೆಂಪು ಮೆಣಸಿನಪುಡಿ – 1/4 ಟೀ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
* ಕೆನೆ – 1 ಕಪ್
* ಪನೀರ್ – 225 ಗ್ರಾಂ
* ಕಸೂರಿ ಮೇಥಿ ಪುಡಿ – 1/2 ಚಮಚ
* ನಿಂಬೆ ರಸ – 2 ಚಮಚ
ಮಾಡುವ ವಿಧಾನ:
* ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಮತ್ತು ಪಾಲಕ್ ಎಲೆಗಳನ್ನು ಹಾಕಿ. ಪಾಲಕ್ ಎಲೆಗಳನ್ನು 2 ರಿಂದ 3 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ
* ನಂತರ ಒಂದು ಬಾಣಲೆಗೆ ಟೊಮೆಟೊ, ಲವಂಗ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಮತ್ತು ಪಾಲಕ್ ಹಾಕಿ ಹುರಿಯಿರಿ. ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
* ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಲವಂಗವನ್ನು ಸೇರಿಸಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ.
* ಇದಕ್ಕೆ ಪಾಲಕ್ ಮಿಶ್ರಣವನ್ನು ಸೇರಿಸಿ, ಮಿಕ್ಸ್ ಮಾಡಿ, ಸುಮಾರು 1/2 ಕಪ್ ನೀರು ಸೇರಿಸಿ. ಪ್ಯಾನ್ ಮುಚ್ಚಿ ಮತ್ತು ಮಧ್ಯಮ ಉರಿಯಲ್ಲಿ 10 ನಿಮಿಷ ಬೇಯಿಸಿ.
* ಪಾಲಕ್ ಮಿಶ್ರಣ ಕುದಿಯುವವರೆಗೂ ಚೆನ್ನಾಗಿ ಬೇಯಿಸಿದ ನಂತರ, ಗರಂ ಮಸಾಲಾ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ 1 ನಿಮಿಷ ಬೇಯಿಸಿ. ಒಂದು ವೇಳೆ ನಿಮಗೆ ಇಷ್ಟವಿದ್ರೆ ಸಕ್ಕರೆ ಸೇರಿಸಿ.
* ಕೆನೆ, ಪನೀರ್ ಬೆರೆಸಿ ಮಿಶ್ರಣ ಮಾಡಿ 3 ರಿಂದ 4 ನಿಮಿಷಗಳ ಕಾಲ ಕುದಿಯಲು ಬಿಡಿ. ಅದಕ್ಕೆ ನಿಂಬೆ ರಸ ಮತ್ತು ಕಸೂರಿ ಮೇಥಿ ಸೇರಿಸಿ ಮಿಶ್ರಣ ಮಾಡಿ.
ಪಾಲಕ್ ಪನೀರ್ ಅನ್ನು ನಾನ್ ಅಥವಾ ರೋಟಿ ಅಥವಾ ಅನ್ನದೊಂದಿಗೆ ಬಿಸಿಯಾಗಿ ಬಡಿಸಿ.