ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಎಲ್ಲರೂ ಮನೆಯಲ್ಲಿದ್ದೀರಿ, ಸಂಜೆ ಹೊರಗೆ ಹೋಗಿ ರುಚಿರುಚಿಯಾದ ಸ್ನ್ಯಾಕ್ಸ್ ತಿನ್ನೋಣ ಎಂದರೆ ಸಾಧ್ಯವಿಲ್ಲ. ಮಕ್ಕಳಂತೂ ಸಂಜೆ ತಿನ್ನಲೂ ಸ್ನ್ಯಾಕ್ಸ್ ಕೇಳುತ್ತಿರುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಇದ್ದು ರುಚಿಯಾದ ಪಾಲಕ್ ಆಮ್ಲೆಟ್ ಮಾಡಿಕೊಡಿ. ನಿಮಗಾಗಿ ಪಾಲಕ್ ಆಮ್ಲೆಟ್ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ – 2
2. ಕಾಳು ಮೆಣಸಿನ ಪುಡಿ – 1/2 ಟೀ ಸ್ಪೂನ್
3. ಲಿಂಬೆ ರಸ – 1/4 ಟೀ ಸ್ಪೂನ್
4. ಸಣ್ಣಗೆ ಕತ್ತರಿಸಿದ ಪಾಲಕ್ ಸೊಪ್ಪು- 1 ಕಪ್
5. ಉಪ್ಪು – ರುಚಿಗೆ ತಕ್ಕಷ್ಟು
6. ಎಣ್ಣೆ – 2 ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ
Advertisement
* ಮೊದಲಿಗೆ ಒಂದು ಬೌಲ್ ನಲ್ಲಿ ಎರಡು ಮೊಟ್ಟೆ ಒಡೆದು ಹಾಕಿಕೊಂಡು, ಅದಕ್ಕೆ ಲಿಂಬೆ ರಸ, ಕಾಳು ಮೆಣಸಿನ ಪುಡಿ, ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ತೊಳೆದು ಕತ್ತರಿಸಿ ಪಾಲಕ್ ಸೊಪ್ಪನ್ನು ಮಿಶ್ರಣಕ್ಕೆ ಮಿಕ್ಸ್ ಮಾಡಿ ಕಲಸಿಕೊಳ್ಳಿ.
* ಸ್ಟೌವ್ ಮೇಲೆ ತವ ಇಟ್ಟು ಎಣ್ಣೆ ಹಾಕಿ. ತವ ಬಿಸಿ ಆಗುತ್ತಿದ್ದಂತೆ ಕಲಿಸಿಕೊಂಡ ಮಿಶ್ರಣವನ್ನು ತವ ಮೇಲೆ ಹಾಕಿ.
* ಕಡಿಮೆ ಉರಿಯಲ್ಲಿ ಎರಡು ಕಡೆ ಬೇಯಿಸಿದ್ರೆ ಪಾಲಕ್ ಆಮ್ಲೆಟ್ ರೆಡಿ.