ಪಾಕ್‌ನ 48 ಗಂಟೆಗಳ ಪ್ಲ್ಯಾನ್‌, 8 ಗಂಟೆಗಳಲ್ಲೇ ಬುಡಮೇಲು; ಸಿಡಿಎಸ್

Public TV
1 Min Read
CDS Anil Chauhan

– ಟ್ರಂಪ್‌ಗೆ ಮೋದಿ ಸರೆಂಡರ್ ಎಂದ ರಾಹುಲ್

ನವದೆಹಲಿ: 100 ಗಂಟೆಗಳ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಫೈಟರ್ ಜೆಟ್, 2 ಅವಾಕ್, 30ಕ್ಕೂ ಹೆಚ್ಚು ಮಿಸೈಲ್ಸ್, ಒಂದು ಸಿ-130 ವಿಮಾನವನ್ನ ಭಾರತ (India) ಧ್ವಂಸಗೊಳಿಸಿದೆ ಅಂತ ತಿಳಿದುಬಂದಿದೆ.

ಇನ್ನೂ ಭಾರತದ ನಷ್ಟಗಳ ಕುರಿತು ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ (CDS Anil Chauhan) ಪುಣೆ ವಿವಿಯಲ್ಲಿ ಮಾತಾಡಿದ್ದಾರೆ. ಸಶಸ್ತ್ರ ಪಡೆಗಳು ತಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಸಮರ್ಥವಾಗಿರಬೇಕು. ಸೋಲುಗಳು ಮುಖ್ಯವಲ್ಲ, ಫಲಿತಾಂಶ ಮುಖ್ಯ. ನಷ್ಟಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಭಾರತದ ಮೇಲೆ ದಾಳಿ ಮಾಡುವ ಪಾಕಿಸ್ತಾನದ 48 ಗಂಟೆಗಳ ಪ್ಲ್ಯಾನನ್ನು ಕೇವಲ 8 ಗಂಟೆಯಲ್ಲೇ ಉಡೀಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಆಪರೇಷನ್ ಸಿಂಧೂರದ ಸೂಕ್ಷ್ಮ ಮಾಹಿತಿ ಹಂಚಿಕೆ – ಪಂಜಾಬ್ ವ್ಯಕ್ತಿ ಅರೆಸ್ಟ್

Rahul Gandhi 4

ಭವಿಷ್ಯದ ಯುದ್ಧಗಳು ವೃತ್ತಿಪರ ಶಕ್ತಿಗಳು ಹಿನ್ನಡೆ ಅಥವಾ ನಷ್ಟಗಳಿಂದ ಪ್ರಭಾವಿತವಾಗುವುದಿಲ್ಲ. ಯುದ್ಧದಲ್ಲಿ ಹಿನ್ನಡೆಗಳಿದ್ದರು ಸಹ ನೈತಿಕತೆಯು ಉನ್ನತ ಮಟ್ಟದಲ್ಲಿ ಉಳಿಯುವುದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?

White and Yellow India Travel Vlog YouTube Thumbnail

ಇನ್ನೂ ಕದನ ವಿರಾಮದ ಬಗ್ಗೆ ರಾಹುಲ್ ಗಾಂಧಿ ಟೀಕೆ ಮುಂದುವರಿದಿದೆ. ಟ್ರಂಪ್ ಒಂದೇ ಒಂದು ಕಾಲ್‌ಗೆ ಪ್ರಧಾನಿ ಮೋದಿ ಶರಣಾಗಿದ್ದಾರೆ ಅಂತ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಲ್ಲಿಂದ ಟ್ರಂಪ್ ಕಾಲ್ ಮಾಡಿ ನರೇಂದರ್… ಸರೆಂಡರ್ ಅಂದ್ರು. ಇವರು `ಯೆಸ್ ಸರ್’ ಅಂತ ಶರಣಾಗಿಬಿಟ್ಟಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್‌ ನವರ ಮೇಲೆ ಸ್ವಲ್ಪ ಒತ್ತಡ ಹಾಕಿದರೂ ಭಯದಿಂದ ಶರಣಾಗಿಬಿಡ್ತಾರೆ. ಇವರು ಹೇಡಿಗಳು. ಆದರೆ, 1971ರಲ್ಲಿ ಇಂದಿರಾ ಗಾಂಧಿ ಈ ರೀತಿ ಮಾಡಿಲ್ಲ ಅಂತ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

Share This Article