ಚಂಡೀಗಢ: ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಚೀನಾ ನಿರ್ಮಿತ ಕ್ಷಿಪಣಿಯ (Missile) ಅವಶೇಷವೊಂದು ಪಂಜಾಬ್‌ನ (Punjab) ಹೋಶಿಯಾರ್‌ಪುರ ಕವಾಯಿದೇವಿಯ ಬಳಿಯ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ.
ಚೀನಾ ನಿರ್ಮಿತ PL-15 (PL-15 Missile) ಭಾರತದ ಭೂಭಾಗ ಪ್ರವೇಶಿಸಿದ್ದರೂ ಯಾವುದೇ ಅಪಾಯ ಉಂಟುಮಾಡಿಲ್ಲ. ಪಾಕ್ ಹಾರಿಸಿದ ಈ ಕ್ಷಿಪಣಿ ಆಟಿಕೆಯಂತೆ ಫೇಲ್ಯೂರ್ ಆಗಿ ನೆಲಕ್ಕೆ ಅಪ್ಪಳಿಸಿದೆ. ಹೀಗಾಗಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯ ಮೂಲಸೌಕರ್ಯದ ವಿಶ್ವಾಸಾರ್ಹತೆ ಮತ್ತೊಮ್ಮೆ ಬಟಾಬಯಲಾಗಿದೆ. ಜೊತೆಗೆ ಚೀನಾ (China) ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದೆಂದು ಹೇಳಲಾಗುತ್ತಿದ್ದ PL-15 ಕ್ಷಿಪಣಿ ನಂಬಿ ಕೆಟ್ಟಂತಾಗಿದೆ. ಇದನ್ನೂ ಓದಿ: ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ
ಚೀನಾ ನಿರ್ಮಿತವಾದ ಈ ಕ್ಷಿಪಣಿ ದೀರ್ಘಶ್ರೇಣಿಯದ್ದಾಗಿದ್ದು, ಗಾಳಿಯಿಂದ ಗಾಳಿಗೆ ಹಾರಿಸುವಂತಹ ಕ್ಷಿಪಣಿಯಾಗಿದೆ. ಇದನ್ನು ಚೀನಾದಿಂದ ಪಾಕ್ ಖರೀಸಿದ್ದ ಜೆಎಫ್-17 ಯುದ್ಧವಿಮಾನದಿಂದ ಹಾರಿಸಲಾಗಿದೆ. ಚಂಡೀಗಢ ಅಥವಾ ಧರ್ಮಶಾಲಾ ಗುರಿಯಾಗಿಸಿ ಹಾರಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಭಾರತ ಮಿಸೈಲ್ ದಾಳಿಗೆ ಪಾಕ್ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ
ಈ ಬೆನ್ನಲ್ಲೇ ಎಚ್ಚೆತ್ತ ವಾಯುಪಡೆ ಚಂಡೀಗಢದಲ್ಲಿ ಸೈರನ್ ಮೊಳಗಿಸಿ ಪಾಕ್‌ನಿಂದ ಸಂಭಾವ್ಯ ದಾಳಿಯ ಬಗ್ಗೆ ಜನರನ್ನ ಎಚ್ಚರಿಸಿದೆ. ಜನರು ರಸ್ತೆಗಳಲ್ಲಿ ಓಡಾಡದಂತೆ, ಬಾಲ್ಕನಿಗಳಲ್ಲೂ ಕಾಣಿಸಿಕೊಳ್ಳದಂತೆ ಸೂಚಿಸಿದೆ. ಇದನ್ನೂ ಓದಿ: ಬಿಎಸ್‌ಎಫ್ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್ ಉಗ್ರರ ಹತ್ಯೆ
ಚೀನಾ ನಂಬಿ ಪಾಕ್ ಕೆಟ್ಟಿದ್ದೇಕೆ?
ಪಾಕ್ ರಕ್ಷಣಾ ಉತ್ಪನ್ನ ಕೈಕೊಟ್ಟಿದ್ದು ಇದೇ ಮೊದಲಲ್ಲ. ಪಾಕಿಸ್ತಾನಕ್ಕೆ ಸರಬರಾಜು ಮಾಡಿದ ಚೀನಾ ನಿರ್ಮಿತ ರೆಡಾರ್ (Chinese Radars) ವ್ಯವಸ್ಥೆಗಳು ಭಾರತೀಯ ಸೇನೆಯ ವಾಯುದಾಳಿಯನ್ನು ಪತ್ತೆಹಚ್ಚುವಲ್ಲಿ ಸಹ ವಿಫಲವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 2022ರ ಮಾರ್ಚ್‌ನಲ್ಲಿಯೂ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ದಾಳಿಯನ್ನ ಪತ್ತೆಹಚ್ಚುವಲ್ಲಿ ಪಾಕಿಸ್ತಾನದ ರೆಡಾರ್ ವ್ಯವಸ್ಥೆ ವಿಫಲವಾಗಿತ್ತು. ʻಆಪರೇಷನ್ ಸಿಂಧೂರʼ ಸಂದರ್ಭದಲ್ಲೂ ಭಾರತೀಯ ಕ್ಷಿಪಣಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಈ ಬೆನ್ನಲ್ಲೇ ಭಾರತದ ಮೇಲೆ ದಾಳಿ ನಡೆಸಲು ಹಾರಿಸಿದ್ದ ಚೀನಾ ನಿರ್ಮಿತ ಕ್ಷಿಪಣಿ ವೈಫಲ್ಯ ಅನುಭವಿಸಿದೆ.
ಚೀನಾದ ರೆಡಾರ್ ವಿಫಲ
ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲು ಭಾರತೀಯ ಕೇಂದ್ರ ಸಚಿವಾಲಯ ಕರೆ ಕೊಟ್ಟಿತ್ತು, ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿ ಯಾರೂ ಊಹಿಸದ ರೀತಿಯಲ್ಲಿ ಪಾಕ್‌ಗೆ ಶಾಕ್ ಕೊಟ್ಟಿದೆ. ಆದ್ರೆ ಪಾಕಿಸ್ತಾನವು ತನ್ನ ರಕ್ಷಣಾ ವ್ಯವಸ್ಥೆಗೆ ಅಳವಡಿಸಿಕೊಂಡಿರುವ ಚೀನಾದ ತಂತ್ರಜ್ಞಾನ ಆಧರಿತ ರೆಡಾರ್ ವ್ಯವಸ್ಥೆಯು ಸೂಕ್ತ ಸಮಯದಲ್ಲಿ ಕ್ಷಿಪಣಿಗಳನ್ನ ಪತ್ತೆ ಹಚ್ಚಲು ಸಾಧ್ಯವಾಗದೇ ಬಹುದೊಡ್ಡ ವೈಫಲ್ಯ ಅನುಭವಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ರಕ್ಷಣಾ ಉತ್ಪನ್ನಗಳ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ಬಾಲಾಕೋಟ್, ಬ್ರಹ್ಮೋಸ್ ಬಳಿಕ ʻಆಪರೇಷನ್ ಸಿಂಧೂರʼ – ಪಾಕ್ ನಂಬಿದ್ದ ʻಮೇಡ್ ಇನ್ ಚೈನಾʼ ರೆಡಾರ್ ಫೇಲ್
ರಿಪೇರಿ ಮಾಡದ ಚೀನಾ
ಇಲ್ಲಿಯವರೆಗೆ ಪಾಕಿಸ್ತಾನ LY-80 ರಕ್ಷಣಾ ವ್ಯವಸ್ಥೆಯಲ್ಲಿನ 388 ದೋಷಗಳ ಸುದೀರ್ಘ ಪಟ್ಟಿಯನ್ನು ಚೀನಾಕ್ಕೆ ಹಸ್ತಾಂತರಿಸಿದೆ, ಅವುಗಳಲ್ಲಿ 103 ಹೊಸದಾಗಿ ಪಟ್ಟಿಮಾಡಲಾದ ದೋಷಗಳಾಗಿದ್ದು, 255 ದೋಷಗಳನ್ನು ತಕ್ಷಣವೇ ಪರಿಹರಿಸಬೇಕಾದ ಅಗತ್ಯವಿದೆ ಎಂದು ಪಾಕ್ ಬೇಡಿಕೊಂಡಿತ್ತು. ಆದರೆ ಚೀನಾ ಸರಿಯಾಗಿ ರಿಪೇರಿ ಮಾಡಿಕೊಟ್ಟಿಲ್ಲ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?