ಇಸ್ಲಾಮಾಬಾದ್/ರಿಯಾದ್: ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೇ ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿ (Love) ಮಾಡ್ತೀನಿ ಸೀಮಾ, ದಯವಿಟ್ಟು ಹಿಂತಿರುಗಿ ಬಂದುಬಿಡು, ನಿನಗೆ ಏನಾದ್ರೂ ಆದ್ರೆ ಯಾರು ನೋಡಿಕೊಳ್ತಾರೆ? ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ತಾರೆ? ವಾಪಸ್ ಬಂದುಬಿಡು ನಾವಿಬ್ಬರು ಹೊಸ ಜೀವನ ಶುರು ಮಾಡೋಣ… ಭಾರತಕ್ಕೆ ಓಡಿ ಬಂದ ಪಾಕ್ ಮಹಿಳೆ ಸೀಮಾ ಹೈದರ್ (Seema Haider) ಮೊದಲ ಪತಿ ಭಾವುಕ ನುಡಿಗಳಿವು.
ಪಬ್‌ಜಿ (PUBG) ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಮೊದಲ ಪತಿ ಗುಲಾಮ್ ಹೈದರ್ ಸೀಮಾ ಹಿಂತಿರುಗುವಂತೆ ಮನವಿ ಮಾಡಿದ್ದಾನೆ. ಭಾರತ ಸರ್ಕಾರಕ್ಕೂ (Indian Government) ತನ್ನ ಪತ್ನಿಯನ್ನು ಕಳುಹಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದಾನೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್ ಮಹಿಳೆ
ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ಪತಿ ಗುಲಾಮ್ ಹೈದರ್ ಪಾಕಿಸ್ತಾನಿ ಯುಟ್ಯೂಬರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೀಗೆ ಮಾತನಾಡಿದ್ದಾನೆ. ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿಸುತ್ತೇನೆ ಮುಂದೆಯೂ ಪ್ರೀತಿಸುತ್ತೇನೆ, ಬಂದುಬಿಡು. ನಿನ್ನನ್ನ, ಮಕ್ಕಳನ್ನ ಕಳೆದುಕೊಳ್ಳಲು ಇಷ್ಟವಿಲ್ಲ. ನಾವು ಮತ್ತೆ ಹೊಸಜೀವನ ಶುರು ಮಾಡೋಣ ಬೇಗನೆ ಬಾ. ನಿನಗೆ ಪಾಕಿಸ್ತಾನ ಸುರಕ್ಷಿತವಲ್ಲ ಅನ್ನಿಸಿದ್ರೆ ಮಕ್ಕಳನ್ನು ಕರೆದುಕೊಂಡು ಸೌದಿಗೆ ಬಂದುಬಿಡು. ನಾವು ಇಲ್ಲಿಯೇ ನೆಲಸೋಣ ಎಂದು ಗೋಳಾಡಿದ್ದಾನೆ.
ಈ ಹಿಂದೆ ನಾನು ಸೀಮಾಳಿಗೆ ತಿಂಗಳಿಗೆ 40-50 ಸಾವಿರ ರೂ. ಕಳುಹಿಸಿಕೊಡ್ತಿದೆ. ಈಗ 80 ರಿಂದ 90 ಸಾವಿರ ಕಳುಹಿಸ್ತೇನೆ ಇಬ್ಬರು ಚೆನ್ನಾಗಿರಬಹುದು. ಅಲ್ಲದೇ ಆಕೆಗೋಸ್ಕರ ಮನೆ ಖರೀದಿಗೆ 17 ಲಕ್ಷ ರೂ. ಇಟ್ಟಿದ್ದೇನೆ ಎಂದಿದ್ದಾನೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ
ʻ’ಹಿಂದುಸ್ತಾನ್ ಜಿಂದಾಬಾದ್ʼ ಘೋಷಣೆ:
ಸೀಮಾ ಮಕ್ಕಳು ಕೆಲ ಸಮಯಗಳ ಹಿಂದೆ ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದ ವೀಡಿಯೋ ಕಂಡುಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗುಲಾಮ್, ಅವರು ಮಕ್ಕಳು ಈಗ ನೀವು ಕೇಳಿದ್ರೆ ಪಾಕಿಸ್ತಾನ್ ಜಿಂದಾಬಾದ್ ಅಂತಲೂ ಹೇಳ್ತಾರೆ ಎಂದಿದ್ದಲ್ಲದೇ, ಸೀಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾ ಅವಳ ಮಾನಹಾನಿ ಮಾಡ್ತಿದ್ದಾರೆ. ಅವಳ ಬಗ್ಗೆ ನನಗೆ ಗೊತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಕೋರಿದ್ದಾರೆ.
ಪಬ್‌ಜೀ ಪ್ರೇಮಕಥೆ (PUBG Love Story) ಶುರುವಾಗಿದ್ದೇ ಥ್ರಿಲ್ಲಿಂಗ್:
ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]