ಲಕ್ನೋ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉತ್ತರ ಪ್ರದೇಶದ ಮೊರಾಬಾದ್‍ನಲ್ಲಿ ಪಾಕಿಸ್ತಾನಿ (Pakistan) ಮಹಿಳೆಯ (Woman) ಹೆಸರು ಮತದಾರರ ಪಟ್ಟಿಯಲ್ಲಿ (Voter List) ಕಾಣಿಸಿಕೊಂಡಿದೆ.
ಪಾಕಿಸ್ತಾನಿ ಮಹಿಳೆ ಸಾಬಾ ಪರ್ವೀನ್ ಎಂಬಾಕೆ 2005ರಲ್ಲಿ ಅಹ್ಮದ್ ಎಂಬಾತನನ್ನು ವಿವಾಹವಾಗಿದ್ದಳು. ಅದಾದ ಬಳಿಕ ಆಕೆ ಮೊರಾಬಾದ್‍ನಲ್ಲಿ ಪಾಕ್ಬರಾ ನಗರ ಪಂಚಾಯತ್ ಪ್ರದೇಶದಲ್ಲಿ ನೆಲೆಸಿದ್ದರು. ಆದರೆ ಆಕೆ ಭಾರತದಲ್ಲಿ ನೆಲೆಸಲು ದೀರ್ಘಾವಧಿ ವೀಸಾವನ್ನು (Visa) ಪಡೆದಿದ್ದಳು. ಈ ಹಿನ್ನೆಲೆಯಲ್ಲಿ ಅವಳಿಗೆ ಮತದಾನವನ್ನು ಮಾಡುವ ಹಕ್ಕಿಲ್ಲ. ಆದರೂ ಇವರನ್ನು ಮೊರಾಬಾದ್‍ನ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿರುವ ವಿಷಯ ಬೆಳಕಿಗೆ ಬಂದಿದೆ.
Advertisement
Advertisement
ಇತ್ತೀಚೆಗೆ ಮತದಾರರ ಪಟ್ಟಿಯ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 2017ರಲ್ಲಿ ನಗರ ಪಂಚಾಯಿತಿ ಚುನಾವಣೆ ನಡೆದಾಗ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿತ್ತು. ಆದರೆ, ನಿಯಮಗಳ ಪ್ರಕಾರ ಆಕೆಯ ಹೆಸರನ್ನು ಅದರಲ್ಲಿ ಸೇರಿಸಲು ಸಾಧ್ಯವಿರಲಿಲ್ಲ. ಇದನ್ನೂ ಓದಿ: ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ
Advertisement
Advertisement
ಇದು ಬೆಳಕಿಗೆ ಬಂದ ತಕ್ಷಣ ಆಕೆಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಜೊತೆಗೆ ಇಂತಹ ಘಟನೆ ಮರುಕಳಿಸದಂತೆ ಇತರೆ ಕಸರತ್ತು ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಅಲ್ಲಿನ ಜಿಲ್ಲಾಧಿಕಾರಿ ಮಾತನಾಡಿದ್ದು, ಪ್ರಕರಣ ದೃಢಪಟ್ಟ ನಂತರ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿರಾಡಿ ಘಾಟ್ ರಸ್ತೆ ದುರಸ್ಥಿಗೆ ಮನವಿ- ಉದ್ಯಮಿಗಳಿಂದ ಸಂಸದ ವೀರೇಂದ್ರ ಹೆಗ್ಡೆಗೆ ಪತ್ರ