– ಇನ್ನು ನಿಮ್ಮ ಸಾಂಪ್ರದಾಯಿಕ ಉಡುಪು
– ಭಾರತೀಯರಿಂದ ಟ್ರೋಲ್‍ಗೆ ಟ್ವೀಟ್ ಡಿಲೀಟ್
– ಫೋಟೋಗೆ ಪಾಕ್ ನೆಟ್ಟಿಗರಿಂದದ ಆಕ್ಷೇಪ
ಇಸ್ಲಾಮಾಬಾದ್: ಕಳೆದ ತಿಂಗಳು ಹಾವಿನೊಂದಿಗಿರುವ ವಿಡಿಯೋ ಪೋಸ್ಟ್ ಮಾಡಿ ಮೋದಿ ವಿರುದ್ಧ ಕಿಡಿಕಾರಿದ್ದ ಪಾಕಿಸ್ತಾನದ ಗಾಯಕಿ ರಬಿ ಫಿರ್ಜಾದಾ ಸದ್ಯ ಹೊಸ ರೂಪದಲ್ಲಿ ಮತ್ತೊಂದು ಫೋಟೋವನ್ನು ಹಂಚಿಕೊಂಡು ಟ್ರೋಲಾಗಿದ್ದಾಳೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಆತ್ಮಹತ್ಯೆ ಬಾಂಬರ್ ರೀತಿಯಲ್ಲಿ ಉಡುಪು ಧರಿಸಿರುವ ಫಿರ್ಜಾದಾ, ‘ಮೋದಿ ಹಿಟ್ಲರ್’ ಹಾಗೂ ‘ಕಾಶ್ಮೀರದ ಭೇಟಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾಳೆ.
Advertisement
Advertisement
ಈ ಫೋಟೋ ಹಂಚಿಕೊಳ್ಳುತ್ತಿದಂತೆ ಹಲವು ನೆಟ್ಟಿಗರು ಗಾಯಕಿಯನ್ನು ಟ್ರೋಲ್ ಮಾಡಿ ಟೀಕೆ ಮಾಡಲು ಆರಂಭಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಹಲವು ಮಂದಿ ಗಾಯಕಿ ವಿರುದ್ಧವೇ ಕಿಡಿಕಾರಿದ್ದು, ಗಾಯಕಿಯ ಈ ನಡೆ ಪಾಕಿಸ್ತಾನದ ವಿರುದ್ಧ ವಿಶ್ವ ಸಮುದಾಯಕ್ಕೆ ಋಣಾತ್ಮಕ ಭಾವನೆ ಮೂಡಲು ಕಾರಣವಾಗುತ್ತದೆ ಎಂದು ದೂರಿದ್ದಾರೆ.
Advertisement
ಇತ್ತ ಭಾರತೀಯ ನೆಟ್ಟಿಗರು ಗಾಯಕಿಯ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಖುಷಿ ವ್ಯಕ್ತಪಡಿಸಿದ್ದರು. ಅಲ್ಲದೇ ಪೋಸ್ಟನ್ನು ಮತ್ತಷ್ಟು ವೈರಲ್ ಮಾಡಿ ಗಾಯಕಿಯ ಕಾಲೆಳೆಯುತ್ತಿದ್ದಾರೆ. ವಾವ್..! ನೀವು ಈ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದು, ಪಾಕಿಸ್ತಾನಿ ಸಾಂಪ್ರದಾಯಕ ಉಡುಪು ಧರಿಸಿದಕ್ಕೆ ಧನ್ಯವಾದ. ಪಾಕ್ ರಾಷ್ಟ್ರೀಯ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಕಾಲೆಳೆದಿದ್ದಾರೆ.
Advertisement
ಈ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿ ಮತ್ತೊಂದು ಟ್ವೀಟ್ ಮಾಡಿರುವ ಫಿರ್ಜಾದಾ, ಈ ಫೋಟೋವನ್ನು ನಾನು ಇಂತಹ ದಾಳಿಗಳನ್ನು ಖಂಡಿಸಲು ಧರಿಸಿದ್ದು, ಶಾಂತಿ ಹಾಗೂ ಮಾನವೀಯತೆಯನ್ನು ಬಯಸುತ್ತೇನೆ. ಮೋದಿ ಸುರಕ್ಷತೆಯ ಬಗ್ಗೆ ನನಗೆ ಉಪನ್ಯಾಸ ನೀಡುವ ಭಾರತೀಯರು ಆಹಾರ, ಔಷಧಿ ಇಲ್ಲದೇ 3 ತಿಂಗಳು ವಿಧಿಸಿದ್ದ ಕಫ್ರ್ಯೂವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಭಾರತದ ಕ್ರೌರ್ಯವನ್ನು ನಿಲ್ಲಿಸಬೇಕೆಂದು ನೆನಪಿಸಲು ಈ ರೀತಿ ಪೋಸ್ಟ್ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾಳೆ.
ಈ ಹಿಂದೆಯೂ ಮೊಸಳೆ, ಹಾವುಗಳೊಂದಿಗೆ ಇರುವ ವಿಡಿಯೋ ಮಾಡಿದ್ದ ಫಿರ್ಜಾದಾ, ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ಎಂದು ಹೇಳಿದ್ದಳು. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತ ಪಾಕ್‍ನ ಅಧಿಕಾರಿಗಳು ಹಾವು, ಮೊಸಳೆಗಳನ್ನು ಬಳಿಸಿ ವಿಡಿಯೋ ಮಾಡಿದ್ದಕ್ಕೆ ದೂರು ದಾಖಲಿಸಿದ್ದರು. ಇದರಿಂದಲೂ ಬುದ್ಧಿ ಕಲಿಯದ ಫಿರ್ಜಾದಾ ಮತ್ತೆ ಹೊಸ ರೀತಿ ಬಂದು ಟ್ರೋಲ್ ಗಳಿಗೆ ಗುರಿಯಾಗಿದ್ದಾಳೆ.
Only in Pakistan would a singer pose with a suicide bomb vest and talk about blowing herself up to assassinate a leader. What a total disgusting place Pakistan has become. Your minds are only filled with hate and violence. Meanwhile, you’re #1 in infant mortality and poverty.
— Indian-Americans (@HinduAmericans) October 23, 2019
Wow!! You looking awesome in traditional Pakistani dress
— Varun Kumar Rana ???????? (@VarunKrRana) October 22, 2019
Kashmiri people safe in india, and they dont want safety like this, This type of safety required by only pakistani peoples.
— Amit Kumar (@AMITMAHUWA) October 23, 2019