ಇಸ್ಲಾಮಾಬಾದ್: ವ್ಯಕ್ತಿಯೋರ್ವ ತನ್ನ ಆರು ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿಯೇ ಕೊಂದಿರುವ ವಿಚಾರ ತಿಳಿದುಬಂದಿದೆ. ಆರೋಪಿಯನ್ನು ಆಶಿಕ್ ಎಂದು ಗುರುತಿಸಲಾಗಿದ್ದು, ಬಜಾರ್ ಎಜೆನ್ಸಿಯ ಶಾಲೆಯಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಆಶಿಕ್, ಸುಮಾರು 8-9 ತಿಂಗಳಿಂದ ಮುಚ್ಚಲಾಗಿದ್ದ ಈ ಶಾಲೆಯ ಸೇವಕ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದನು.
Advertisement
Advertisement
ಘಟನೆ ಬಳಿಕ ಆರೋಪಿ ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದು, ಆತನ 15 ವರ್ಷದ ಪುತ್ರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇದೀಗ ಮೂವರು ಮಕ್ಕಳ ಪಾಲನೆಯನ್ನು ಪೊಲೀಸರು ಮಾಡುತ್ತಿರುವುದಾಗಿ ಜಿಲ್ಲಾ ಪೂರ್ವ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಅಬ್ದುರ್ ರಹೀಮ್ ಶೆರಾಜಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಉಡುಪಿ ಹಿಸ್ಟರಿಯಲ್ಲೇ ಇದೊಂದು ಖತರ್ನಾಕ್ ಕ್ರೈಂ- ತಪ್ಪಿಸಿಕೊಳ್ಳಲು ಮಾಡಿದ್ದ ಪ್ಲಾನ್ನಿಂದಲೇ ಸಿಕ್ಕಿಬಿತ್ತು ಜೋಡಿ
Advertisement
Advertisement
ಘಟನೆ ಸಂಬಂಧ ಮಕ್ಕಳ ಹೇಳಿಕೆ ಪಡೆದಿರುವ ಪೊಲೀಸರು, ಆರೋಪಿ ಮೊದಲು ತನ್ನ ಪತ್ನಿಯನ್ನು ದಿಂಬಿನಿಂದ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಮಕ್ಕಳ ಮುಂದೆಯೇ ಕಡಾಯಿಯಲ್ಲಿ ಬೇಯಿಸಿದ್ದಾನೆ. ಅಲ್ಲದೇ ಮಹಿಳೆಯ ಒಂದು ಕಾಲು ಕೂಡ ಆಕೆಯ ದೇಹದಿಂದ ಬೇರ್ಪಟ್ಟಿದೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆ ಹಿಂದಿನ ಕಾರಣವೇನು ಎಂಬುವುದು ತಿಳಿದುಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಲಾಡ್ಜ್ನಲ್ಲಿ ಸಲಿಂಗಿಗಳ ಕಿತ್ತಾಟ – ಓರ್ವ ಸಾವು, ಇನ್ನೊಬ್ಬ ಜೈಲಿಗೆ
ಆರೋಪಿ ತನ್ನ ಹೆಂಡತಿಗೆ ಅಕ್ರಮ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಬಲವಂತಪಡಿಸಿದ್ದು, ಇದಕ್ಕೆ ಮಹಿಳೆ ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.