ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜಗಳು ಇನ್ನು ಇತಿಹಾಸ ಮಾತ್ರ. ಇನ್ನು ಇಲ್ಲಿ ಭಾರತದ ರಾಷ್ಟçಧ್ವಜವನ್ನು ಮಾತ್ರ ಹಾರಿಸಲಾಗುತ್ತದೆ ಎಂದು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಹೇಳಿದ್ದಾರೆ.
ಶ್ರೀನಗರದ ದಾಲ್ ಸರೋವರದ ಉದ್ದಕ್ಕೂ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿನ್ಹಾ, ಜಮ್ಮು, ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜ ಎತ್ತುವುದು ಇತಿಹಾಸ. ಈ ಹಿಂದೆ ತ್ರಿವರ್ಣ ಧ್ವಜ ಏರಿಸಲು ಪ್ರಯತ್ನಗಳು ನಡೆದಿರುವುದೇ ವಿರಳ. ಆದರೆ ಈಗ ಜನರು ಕೂಡಾ ತಿರಂಗವನ್ನು ಏರಿಸಲು ಬಯಸುತ್ತಾರೆ ಎಂದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ
Advertisement
Advertisement
ಇಂದಿನ ತಿರಂಗಾ ಯಾತ್ರೆ ಈ ಪ್ರದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮವಾಗಿದೆ. ಅದೂ ಸಹ ಆಗಸ್ಟ್ 14 ರಂದು. ಭದ್ರತಾ ಸವಾಲುಗಳ ನಡುವೆಯೂ ತಿರಂಗವನ್ನು ಹಾರಿಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಬೃಹತ್ ಮಟ್ಟದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಎಲ್ಲೆಡೆ ತಿರಂಗವನ್ನು ಬೆಳೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ಹರ್‌ಘರ್ ತಿರಂಗ ಅಭಿಯಾನ – ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿ ಸಂತಸಗೊಂಡ ಮೋದಿ ತಾಯಿ
Advertisement
ಈ ವೇಳೆ ಸೇನಾ ಸಿಬ್ಬಂದಿ, ಗಡಿ ಪೊಲೀಸ್ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.