ಶ್ರೀನಗರ: ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ ಆಗಿದ್ದು, ಬಿಎಸ್‍ಎಫ್ ಯೋಧರು ಡ್ರೋನ್‍ಗೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಪಾಕಿಸ್ತಾನಿ ಡೋನ್ ಮೇಲೆ ಗುಂಡು ಹಾರಿಸಿದ ನಂತರ ಮರಳಿ ಹೋಗಿದೆ. ಡ್ರೋನ್ ಯಾವುದೇ ಶಸ್ತ್ರಾಸ್ತ್ರ ಅಥವಾ ಸ್ಫೋಟಕವನ್ನು ಅದು ಬೀಳಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಅದನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಬಿಎಸ್‍ಎಫ್ ಪ್ರಾರಂಭಿಸಿದೆ.
Advertisement
Advertisement
ಅರ್ನಿಯಾ ಪ್ರದೇಶದಲ್ಲಿ ಇಂದು ಮುಂಜಾನೆ ಡ್ರೋನ್‍ನಿಂದ ಬರುವ ಬೆಳಕನ್ನು ಬಿಎಸ್‍ಎಫ್ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಸ್‍ಎಫ್ ಪಡೆಗಳು ಸುಮಾರು 300 ಮೀ. ಎತ್ತರದಲ್ಲಿ ಹಾರುತ್ತಿರುವ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ ಅದು ವಾಪಸ್ ಹೋಗಿದೆ. ಇದನ್ನೂ ಓದಿ: ಒಂದೇ ಜಾಗದಲ್ಲಿ 30 ಗುಂಡಿಗಳು – ನಮ್ಮ ಸುಪರ್ದಿಗೆ ಬರಲ್ಲ ಎಂದ ಬಿಬಿಎಂಪಿ
Advertisement
ಭಯೋತ್ಪಾದಕರನ್ನು ಸಜ್ಜುಗೊಳಿಸಲು ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯ ಮೂಲಕ ಡ್ರೋನ್‍ಗಳ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ಡ್ರೋನ್‍ಗಳ ಮೂಲಕ ಕಳ್ಳಸಾಗಣೆ ಮಾಡಲು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಗಡಿಯುದ್ದಕ್ಕೂ ಪ್ರಯತ್ನಿಸುತ್ತಿದೆ. ಈ ಬಗ್ಗೆ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿವೆ. ಇದನ್ನೂ ಓದಿ: ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು – ರಾತ್ರಿ 8:30 ಬಳಿಕ ಮಾರುಕಟ್ಟೆ, 10ರ ಬಳಿಕ ಮದುವೆ ಮಾಡುವಂತಿಲ್ಲ
Advertisement
ಇತ್ತೀಚೆಗಷ್ಟೇ ಜಮ್ಮು, ಕಥುವಾ ಮತ್ತು ಸಾಂಬಾ ಸೆಕ್ಟರ್‌ಗಳಲ್ಲಿ ಹಲವಾರು ಡ್ರೋನ್‍ಗಳನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಇದರ ಜೊತೆಗೆ ರೈಫಲ್‍ಗಳು, ಮಾದಕ ದ್ರವ್ಯಗಳು, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ.