InternationalLatestMain Post

ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು – ರಾತ್ರಿ 8:30 ಬಳಿಕ ಮಾರುಕಟ್ಟೆ, 10ರ ಬಳಿಕ ಮದುವೆ ಮಾಡುವಂತಿಲ್ಲ

Advertisements

ಇಸ್ಲಾಮಾಬಾದ್: ಹಣದ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನ, ಇಂಧನವನ್ನು ಉಳಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆ ಸರ್ಕಾರ ಇಸ್ಲಾಮಾಬಾದ್ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಿದೆ ಹಾಗೂ ದೇಶಾದ್ಯಂತ ರಾತ್ರಿ 8:30ರ ಬಳಿಕ ಮಾರುಕಟ್ಟೆಗಳನ್ನು ಮುಚ್ಚಲು ನಿರ್ಧರಿಸಿದೆ.

ಪಾಕಿಸ್ತಾನದ ವಿದ್ಯುತ್ ಬಿಕ್ಕಟ್ಟು ಅಲ್ಲಿನ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆ ರಾಷ್ಟ್ರೀಯ ಆರ್ಥಿಕ ಮಂಡಳಿ(ಎನ್‌ಇಸಿ) ದೇಶಾದ್ಯಂತ ಮಾರುಕಟ್ಟೆಗಳನ್ನು ರಾತ್ರಿ 8:30ಕ್ಕೆ ಮುಚ್ಚುವಂತೆ ಒತ್ತಾಯಿಸಿದೆ. ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾತ್ರಿ 10 ಗಂಟೆ ಬಳಿಕ ಯಾವುದೇ ಮದುವೆ ಕಾರ್ಯಕ್ರಮಗಳನ್ನು ನಡೆಸದಂತೆ ತಿಳಿಸಿದೆ. ಈ ಕ್ರಮವನ್ನು ಜೂನ್ 8ರಿಂದಲೇ ಕಾರ್ಯಗತಗೊಳಿಸಿದೆ. ಇದನ್ನೂ ಓದಿ: ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

ಬುಧವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಂಧ್, ಪಂಜಾಬ್ ಹಾಗೂ ಬಲೂಚಿಸ್ತಾನದ ಮುಖ್ಯಮಂತ್ರಿಗಳು ಈ ಬಗ್ಗೆ ಸಮಾಲೋಚನೆ ನಡೆಸಲು 2 ದಿನಗಳ ಕಾಲಾವಕಾಶ ಕೋರಿದ್ದು, ಆದರೂ ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ 22,000 ಮೆಗಾವ್ಯಾಟ್ ಹಾಗೂ ಅವಶ್ಯಕತೆ ಇರುವುದು 26,000 ಮೆಗಾವ್ಯಾಟ್. ದೇಶದಲ್ಲಿ ಸುಮಾರು 4,000 ಮೆಗಾವ್ಯಾಟ್ ಶಕ್ತಿಯ ಕೊರತೆಯಿದೆ. ಮಾರುಕಟ್ಟೆಯನ್ನು ಬೇಗನೆ ಮುಚ್ಚುವುದು ಹಾಗೂ ಜನರಿಗೆ ಮನೆಯಿಂದಲೇ ಕೆಲಸ ಮಾಡಿಸುವ ವ್ಯವಸ್ಥೆಗಳಿಂದ ವಿದ್ಯುತ್ ಅನ್ನು ಉಳಿಸಬಹುದು ಎಂದು ವಿದ್ಯುತ್ ಸಚಿವ ಖರ‍್ರುಮ್ ದಸ್ತಗಿರ್ ತಿಳಿಸಿದ್ದಾರೆ.

Leave a Reply

Your email address will not be published.

Back to top button