ಇಸ್ಲಾಮಾಬಾದ್: ಉಭಯ ದೇಶಗಳ ನಡುವಿನ ಜಲ ವಿವಾದದ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ನಿಯೋಗದ 5 ಸದಸ್ಯರು ಮೇ 30-31 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಂಧೂ ನದಿ ವಿವಾದವನ್ನು ಬಗೆಹರಿಸುವ ಬಗ್ಗೆ ಮೇ 30 ಹಾಗೂ 31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ಕಮಿಷನರ್ ಸೈಯದ್ ಮಹಮ್ಮದ್ ಮೆಹರ್ ಅಲಿ ಷಾ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ – 7 ಪಾಸಿಟಿವ್
Advertisement
Advertisement
ಪಾಕಿಸ್ತಾನದ ನಿಯೋಗ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವಾಸ ಮಾಡಲಿದ್ದು, ಭಾರತದೊಂದಿಗಿನ ಮಾತುಕತೆಯಲ್ಲಿ ಪ್ರವಾಹ ಮುನ್ಸೂಚನೆಯ ದತ್ತಾಂಶವನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಪಿಸಿಐಡಬ್ಲ್ಯು(ಸಿಂಧೂ ನೀರಿನ ಪಾಕಿಸ್ತಾನದ ಆಯುಕ್ತ)ವಿನ ವಾರ್ಷಿಕ ವರದಿಯನ್ನು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ
Advertisement
ಮಾರ್ಚ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸಿಂಧೂ ಜಲ ಒಪ್ಪಂದವನ್ನು ಅದರ ನೈಜ ಸ್ಫೂರ್ತಿಯೊಂದಿಗೆ ಕಾರ್ಯಗತಗೊಳಿಸುವ ಬದ್ಧತೆ ಬಗ್ಗೆ ಮತ್ತೆ ಪ್ರಸ್ತಾಪ ನಡೆಸಿತ್ತು. ಈ ಬಗ್ಗೆ ಖಾಯಂ ಸಿಂಧೂ ಆಯೋಗ ಮುಂದಿನ ಸಭೆಯನ್ನು ಭಾರತದಲ್ಲಿ ನಡೆಸುವ ಬಗ್ಗೆ ಭರವಸೆ ನೀಡಿತ್ತು.