ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ.
- Advertisement
ಲಾಹೋರ್‍ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್‍ಸಾಬ್ ಅಲಿ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅನ್ಸಾರ್ ಹುಸೇನ್ ಕಳೆದ ನ.11ರಂದು ತಾನು ಸಾಕಿದ್ದ ಹೆಣ್ಣು ಕೋಳಿಯೊಂದನ್ನು ಅಪಹರಿಸಿ ಅದರ ಮೇಲೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂದು ತಿಳಿಸಿದ್ದಾರೆ.
- Advertisement
ಇದನ್ನೂ ಓದಿ: ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ
ಅಲ್ಲದೇ ಆರೋಪಿ ಅನ್ಸಾರ್ ಹುಸೇನ್ ರೇಪ್ ಕೃತ್ಯದಿಂದಾಗಿ ಕೋಳಿ ಸತ್ತು ಹೋಗಿತ್ತು. ರೇಪ್ ಕೃತ್ಯವನ್ನು ನಸ್ರುಲ್ಲಾ ಮತ್ತು ತುಫೇಲ್ ಎಂಬವರು ನೋಡಿದ್ದರು. ಅಂತೆಯೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಅನ್ಸಾರ್ ಹುಸೇನ್ ನನ್ನು ಬಂಧಿಸಿದ್ದರು.
ಇದನ್ನೂ ಓದಿ: ಡ್ರಾಪ್ ನೆಪದಲ್ಲಿ ಯುವತಿಯ ಅಪಹರಣಗೈದು ಗ್ಯಾಂಗ್ ರೇಪ್ ಮಾಡಿದ್ರು
ಬಳಿಕ ಪೊಲಿಸರು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಾನು ಕೋಳಿಯ ಮೇಲೆಸೆಗಿದ ಕೃತ್ಯ ನಿಜವೆಂದು ಒಪ್ಪಿಕೊಂಡಿದ್ದಾನೆ.